ಧಗಧಗನೆ ಉರಿದ ಕೈಕಂಬ ಗುಡ್ಡೆ ► ಸುಮಾರು 4 ಎಕರೆ ಗುಡ್ಡೆ ಬೆಂಕಿಗಾಹುತಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ.14. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಕೈಕಂಬದ ಪೂಂಜಾ ಸ್ಟೇಡಿಯಂನಲ್ಲಿ ಹಠಾತ್ತನೆ ಬೆಂಕಿ ಕಾಣಿಸಿಕೊಂಡು ಸ್ಥಳೀಯರನ್ನು ಭಯ ಭೀತರನ್ನಾಗಿಸಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಬಂಟ್ವಾಳ ಸಮೀಪದಲ್ಲಿರುವ ಪೂಂಜಾ ಸ್ಟೇಡಿಯಂನ ಸುಮಾರು 4 ಎಕರೆ ಪ್ರದೇಶವು ಬೆಂಕಿಗಾಹುತಿಯಾಗಿದೆ. ಯಾರೋ ಸ್ಥಳೀಯರು ಹುಲ್ಲುಗಳನ್ನು ನಾಶ ಮಾಡಲು ಬೆಂಕಿಯನ್ನು ಕೊಟ್ಟ ಪರಿಣಾಮ ಬೆಂಕಿ ಸಂಪೂರ್ಣ ಗುಡ್ಡೆಯನ್ನು ಆವರಿಸಿಕೊಂಡಿತ್ತು. ತಕ್ಷಣವೇ ಬಂಟ್ವಾಳ ಅಗ್ನಿಶಾಮಕದಳದವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಸೇರಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಬಂಟ್ವಾಳ ನಗರ ಠಾಣಾ ಉಪನಿರೀಕ್ಷಕ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ಭದ್ರತೆ ಕೈಗೊಂಡರು.

Also Read  ನಿಷೇಧಿತ ಇ-ಸಿಗರೇಟ್‌ ವಿರುದ್ಧ ಪೊಲೀಸರ ಕಾರ್ಯಾಚರಣೆ ➤ ನಾಲ್ವರು ಆರೋಪಿಗಳ ಬಂಧನ

error: Content is protected !!
Scroll to Top