ಪಿಯುಸಿ ಪರೀಕ್ಷೆಯಲ್ಲಿ 37 ಅಂಕ ಪಡೆದ ವಿದ್ಯಾರ್ಥಿನಿಗೆ 97 ಅಂಕ ನೀಡಿದ ಮೌಲ್ಯಮಾಪಕರು..!

(ನ್ಯೂಸ್ ಕಡಬ)Newskadaba.com ಧಾರವಾಡ,ಮೇ.04 ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾದಾಗ 37 ಅಂಕ ಪಡೆದಿದ್ದ ವಿದ್ಯಾರ್ಥಿನಿ ಈಗ 97 ಅಂಕ ಗಳಿಸಿದ್ದಾಳೆ.ಇದರಿಂದಾಗಿ ಉತ್ತರ ಪತ್ರಿಕೆ ಮೌಲ್ಯಮಾಪಕರ ನಿರ್ಲಕ್ಷ್ಯ ಮತ್ತೊಮ್ಮೆ ಬಯಲಾದಂತಾಗಿದೆ. ಧಾರವಾಡದ ವೈ.ಬಿ.ಅಣ್ಣಿಗೇರಿ ಪಿಯು ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಧರಣಿ ಅವರಿಗೆ ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ಕನ್ನಡದಲ್ಲಿ 37 ಅಂಕ ಬಂದಿತ್ತು.

ಇದರಿಂದ ಅನುಮಾನಗೊಂಡ ಧರಣಿ ಕನ್ನಡ ವಿಷಯದ ಉತ್ತರ ಪತ್ರಿಕೆ ಜೆರಾಕ್ಸ್ ಪತ್ರಿಕೆ ತರಿಸಿದಾಗ 97 ಅಂಕ ಬಂದಿರುವುದು ಗೊತ್ತಾಗಿದೆ.ಮೌಲ್ಯಮಾಪಕರ ಮತ್ತು ವಿಷಯ ಮೇಲ್ವಿಚಾರಕರ ನಿರ್ಲಕ್ಷದಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ವ್ಯಕ್ತಿರಿಕ್ತ ಪರಿಣಾಮ ಉಂಟಾಗುತ್ತಿದ್ದು, ಇಂತಹ ಆಚಾತುರ್ಯವಾಗದಂತೆ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿನಿಯ ಪೋಷಕರು ಮತ್ತು ಕಾಲೇಜಿನ ಆಡಳಿತ ಮಂಡಳಿ ಆಗ್ರಹಿಸಿದೆ.

Also Read  ಬಿಸಿಎಂ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ..!   ➤ ಪ್ರಕರಣ ದಾಖಲು.!

 

error: Content is protected !!
Scroll to Top