ಏಳನೇ ಬಾರಿ ಜಯದ ವಿಶ್ವಾಸದಿಂದ ಚುನಾವಣಾ ಕಣಕ್ಕಿಳಿದ ಬಿಜೆಪಿ ಅಭ್ಯರ್ಥಿ!‌ ➤ ರಮೇಶ್‌ ಜಾರಕಿಹೊಳಿ

(ನ್ಯೂಸ್ ಕಡಬ)Newskadaba.com ಬೆಳಗಾವಿ,ಮೇ.04 ಗೋಕಾಕ ಕ್ಷೇತ್ರದಿಂದ ಸತತ ಆರು ಬಾರಿ ಗೆದ್ದು ವಿಶಿಷ್ಟ ದಾಖಲೆ ಮಾಡಿರುವ ರಮೇಶ್‌ ಜಾರಕಿಹೊಳಿ ಈಗ ಏಳನೇ ಬಾರಿ ಜಯದ ವಿಶ್ವಾಸದೊಂದಿಗೆ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಡಾ| ಮಹಾಂತೇಶ್‌ ಕಡಾಡಿ ಅವರನ್ನು ಕಣಕ್ಕಿಳಿಸಲಾಗಿದೆ.ಆದರೆ ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಸಂಬಂಧಿ ಮಹಾಂತೇಶ್‌ ಕಡಾಡಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಟ್ಟಿದ್ದೇಕೆ ಎಂಬ ಪ್ರಶ್ನೆ ಕ್ಷೇತ್ರದ ಜನರನ್ನು ಕಾಡುತ್ತಿದೆ.

1985ರಿಂದ ಚುನಾವಣ ಕಣದಲ್ಲಿರುವ ರಮೇಶ್‌ ತಮ್ಮ ಮೊದಲ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಅನಂತರ ಯಾವತ್ತೂ ಸೋತಿಲ್ಲ. ಆರು ಬಾರಿ ಶಾಸಕರಾಗಿರುವ ರಮೇಶ್‌ ಇದರಲ್ಲಿ 5 ಸಲ ಕಾಂಗ್ರೆಸ್‌ನಿಂದ ಗೆದ್ದು ಬಂದಿದ್ದರು. 2018ರಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಗನುಗುಣವಾಗಿ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದರು.ಪಕ್ಷ ಬದಲಿಸಿದರೂ ಗೆಲುವು  ಪಕ್ಷ ಬದಲಿಸಿದರೂ ಕ್ಷೇತ್ರದ ಜನರು ಅವರನ್ನು ಬಿಟ್ಟು ಹೋಗಲಿಲ್ಲ.

Also Read  ಕಡಬ ಬ್ಲಾಕ್ ಕಾಂಗ್ರೆಸ್ ನಿಂದ ವಿಜೇತ ಗ್ರಾ.ಪಂ. ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ➤ ಬಿಜೆಪಿಯವರು ಅಧಿಕಾರ ದುರುಪಯೋಗ ಮಾಡಿ ಹೆಚ್ಚು ಸ್ಥಾನ ಗಳಿಸಿದ್ದಾರೆ: ಐವನ್ ಡಿಸೋಜಾ

 

error: Content is protected !!
Scroll to Top