ಆ್ಯಪಲ್ ತುಂಡು ಗಂಟಲಲ್ಲಿ ಸಿಲುಕಿ ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ, ಜ.14. ಸೇಬು ತುಂಡೊಂದು ಗಂಟಲಲ್ಲಿ ಸಿಕ್ಕಿ ಹಾಕಿಕೊಂಡ ಪರಿಣಾಮ ಬಾಲಕ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರದಲ್ಲಿ ಶನಿವಾರದಂದು ನಡೆದಿದೆ.

ಮೃತ ಯುವಕನನ್ನು ಚಿಕ್ಕಬಳ್ಳಾಪುರದ ನಕ್ಕಲಕುಂಟೆಯ ಶಾಂತಿನಗರ ನಿವಾಸಿ ಆಸೀಫ್ (11) ಎಂದು ಗುರುತಿಸಲಾಗಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಆಸೀಫ್ ಶನಿವಾರದಂದು ಸೇಬು ಹಣ್ಣು ತಿನ್ನುವ ವೇಳೆ ಏಕಾಏಕಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾನೆ. ಆಸೀಫ್ ಶವದ ಮರಣೋತ್ತರ ಪರೀಕ್ಷೆ ನಡೆಸಿದ ಜಿಲ್ಲಾ ಆಸ್ಪತ್ರೆಯ ವೈದ್ಯರು ಗಂಟಲಿನಲ್ಲಿ ಸೇಬು ಸಿಕ್ಕಿಹಾಕಿಕೊಂಡಿದ್ದರಿಂದಲೇ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

Also Read  ರಾಜ್ಯಕ್ಕೆ ಮತ್ತೊಂದು ಮಹಾಮಾರಿ ಎಂಟ್ರಿ ➤ ಜಾನುವಾರುಗಳಿಗೆ ಅಂಟಿದ ಚರ್ಮಗಂಟು ವೈರಸ್

error: Content is protected !!
Scroll to Top