ಕ್ಷುಲ್ಲಕ ಕಾರಣಕ್ಕಾಗಿ ನಡೆದ ಕಾಲೇಜು ವಿದ್ಯಾರ್ಥಿಯರ ಗಲಾಟೆ..!‌ ➤ಕೊಲೆಯಲ್ಲಿ ಅಂತ್ಯ

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ..03 ರಾತ್ರಿ ಕಾಲೇಜು ಫೆಸ್ಟಿವಲ್ ಸಂದರ್ಭದಲ್ಲಿ ಅದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಭರತೇಶ್ ಸ್ನೇಹಿತನ ಅತ್ತೆ ಮಗಳ ಮೇಲೆ ಶರತ್ ಎಂಬಾತ ಕ್ರಿಕೆಟ್ ಬಾಲ್ ಎಸೆದಿದ್ದ. ಇದೇ ವಿಚಾರವಾಗಿ ಶರತ್ ಹಾಗೂ ಆತನ ಸ್ನೇಹಿತ ಭಾಸ್ಕರ್ ಜೆಟ್ಟಿ ಜೊತೆ ಭರತೇಶ್ ಗುಂಪು ಗಲಾಟೆ ನಡೆಸಿತ್ತು.

ಈ ವೇಳೆ ಏಕಾಏಕಿ ಮಧ್ಯ ಪ್ರವೇಶಿಸಿದ್ದ ಆರೋಪಿ ಅನಿಲ್ ಏಕಾಏಕಿ ಭಾಸ್ಕರ್ ಜೆಟ್ಟಿಯ ಎದೆಗೆ ಚಾಕು ವಿನಿಂದ ಇರಿದಿದ್ದ. ಪರಿಣಾಮ ತೀವ್ರ ರಕ್ತಸ್ರಾವದಿಂದ ಭಾಸ್ಕರ್ ಜೆಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದ.ಲಾಟೆಗೂ ತನಗೂ ಸಂಬಂಧವಿಲ್ಲದಿದ್ದರೂ ಚಾಕು ಇರಿದಿದ್ದ ಆರೋಪಿ ಅನಿಲ್ ಹಾಗೂ ಶೃಂಗ ಎಂಬಾತನನ್ನು ಬಾಗಲೂರು ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ‌.ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಭರತೇಶ್​ನನ್ನ ಬಂಧಿಸಿದ್ದರು.

Also Read  ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ ➤ ವಿಡಿಯೋ ವೈರಲ್

 

error: Content is protected !!
Scroll to Top