ಮಂಗಳಮುಖಿಗೆ  ಅವಾಚ್ಯ ಶಬ್ಧಗಳಿಂದು ಬೈದು ಹಲ್ಲೆ ಮಾಡಿದ ನಾಲ್ವರು ಅಪರಿಚಿತ ಯುವಕರು..!​ ➤ ದೂರು ದಾಖಲು

(ನ್ಯೂಸ್ ಕಡಬ)Newskadaba.com ನವದೆಹಲಿ,ಮೇ.03 ಮಂಗಳಮುಖಿ ಶಾಂತಿ ಎಂಬವರ ಮೇಲೆ ಹಲ್ಲೆ ನಡೆದಿದೆ. ರಾತ್ರಿ ಕುಂಟಿಕಾನ ಬಳಿ ಇದ್ದಾಗ ಅಲ್ಲಿಗೆ ಬಂದಿದ್ದ ನಾಲ್ವರು ಯುವಕರು ಅವಾಚ್ಯವಾಗಿ ಬೈದು ಕಲ್ಲು, ಪ್ಲಾಸ್ಟಿಕ್‌ ಪೈಪ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ. ಈ ವೇಳೆ ಕಾರು ಬರುತ್ತಿರುವುದನ್ನು ಕಂಡು ಓಡಿ ಹೋಗಿದ್ದಾರೆ.

ಹಲ್ಲೆ ವೇಳೆ ಶಾಂತಿ ಅವರ ಬ್ಯಾಗ್‌ ನೆಲಕ್ಕೆ ಬಿದ್ದಿದ್ದು, ಅನಂತರ ಅದನ್ನು ಪರಿಶೀಲಿಸಿದಾಗ ಅದರಲ್ಲಿದ್ದ 6,000 ರೂ. ಹಣ ನಾಪತ್ತೆಯಾಗಿದೆ ಎಂದು ದೂರಲಾಗಿದೆ.ಘಟನೆಯ ಬಳಿಕ ಶಾಂತಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ.ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಜೂ. 26ರಂದು ದೇಶದ 5 ಕಡೆ ವಂದೇಭಾರತ್ ರೈಲುಗಳಿಗೆ ಚಾಲನೆ

 

 

error: Content is protected !!
Scroll to Top