ಅಪಹರಣಕ್ಕೊಳಗಾಗಿದ್ದ ಸ್ಥಳೀಯ ಬಿಜೆಪಿ ನಾಯಕ ಬಿಜೋಯ್ ಭೂಯಾ ಮೃತದೇಹ ಪತ್ತೆ..!​

(ನ್ಯೂಸ್ ಕಡಬ)Newskadaba.com ಪಶ್ಚಿಮಬಂಗಾಳ,ಮೇ..03 ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ಅಪಹರಣಕ್ಕೊಳಗಾಗಿದ್ದ ಸ್ಥಳೀಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಬಿಜೋಯ್ ಭೂಯಾ ಅವರ ಮೃತದೇಹ ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ.ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬೆಂಬಲಿತ ಗೂಂಡಾಗಳು ಭೂಯಾ ಅವರನ್ನು ಕೊಂದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ.

ಕುಟುಂಬ ಸಮೇತ ಮನೆಗೆ ಹಿಂತಿರುಗುತ್ತಿದ್ದ ಭೂಯಾ ಅವರ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ. ನಂತರ ಅವರನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ ಎನ್ನಲಾಗಿದೆ. ನಂತರ ಸ್ಥಳೀಯರಿಗೆ ರಸ್ತೆಬದಿಯಲ್ಲಿ ರಕ್ತದ ಮಡುವಿನಲ್ಲಿ ಆತನ ಶವ ಪತ್ತೆಯಾಗಿದೆ. ಆತನ ದೇಹದಲ್ಲಿ ಹಲವು ಗಾಯಗಳು ಕಂಡು ಬಂದಿದೆ, ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಮನೆಗೆ ನುಗ್ಗಿ ಕಳವು ಪ್ರಕರಣ ಆರೋಪಿ ಅರೆಸ್ಟ್..!

ಮತಗಟ್ಟೆ ಅಧ್ಯಕ್ಷ ಬಿಜೋಯ್ ಬಾಬು ಅವರು ಕುಟುಂಬ ಸಮೇತ ಮನೆಗೆ ಮರಳುತ್ತಿದ್ದ ವೇಳೆ ಮೊನೊರಂಜನ್ ಹಜ್ರಾ ಮತ್ತು ಟಿಎಂಸಿ ಬೆಂಬಲಿತ ಗೂಂಡಾಗಳು ದಾಳಿ ನಡೆಸಿದ್ದರು ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

 

 

 

 

error: Content is protected !!
Scroll to Top