ಕುಮಾರಸ್ವಾಮಿಯನ್ನು ಮಣಿಸಲು ಬಿಜೆಪಿಯಿಂದ ಕಣಕ್ಕಿಳಿದ ಯೋಗೇಶ್ವರ್‌..!​

(ನ್ಯೂಸ್ ಕಡಬ)Newskadaba.com ರಾಮನಗರ,ಮೇ..03 ಹಾಲಿ ಮತ್ತು ಮಾಜಿ ಪ್ರಧಾನಿಗಳ ಪ್ರಚಾರ, ಸಿಎಂ ಆಗಲು ಹೊರಟಿರುವವರು, ಸಿಎಂ ಕುರ್ಚಿ ಕೆಡವಿದವರ ಮುಖಾಮುಖೀ ಕ್ಷೇತ್ರದಲ್ಲಿ ರಾಜಕೀಯ ರಂಗೇರುವಂತೆ ಮಾಡಿದ್ದು, ದಳಪತಿ ಕುಮಾರಸ್ವಾಮಿ ಮಣಿ ಸಲು ಬಿಜೆಪಿಯಿಂದ ಸೈನಿಕ ಚಿತ್ರದ ಖ್ಯಾತಿಯ ಯೋಗೇಶ್ವರ್‌ ಕಣಕ್ಕಿಳಿದಿದ್ದಾರೆ.ಇವರಿಬ್ಬರ ಜಿದ್ದಾಜಿದ್ದಿನ ಹೋರಾಟದ ನಡುವೆ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್‌ ಕಸರತ್ತು ನಡೆಸುತ್ತಿದೆ.

ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮುಸ್ಲಿಂ,ದಲಿತ ಮತ್ತು ಹಿಂದುಳಿದ ಸಮು ದಾಯದ ಮತಗಳು ನಿರ್ಣಾಯಕವೆನಿಸಿದೆ. ಈ ಬಾರಿ ಗೆಲುವಿಗೆ ಟೊಂಕ ಕಟ್ಟಿರುವ ಎರಡೂ ಅಭ್ಯರ್ಥಿಗಳು ಎಲ್ಲ ಸಮುದಾಯಗಳ ಓಲೆಕೆಗೆ ಕಸರತ್ತು ನಡೆಸುತ್ತಿದ್ದಾರೆ.

Also Read  ಮನೆಯ ವಿದ್ಯುತ್ ಖರ್ಚನ್ನು ಆದಷ್ಟು ಕಡಿಮೆಗೊಳಿಸಲು ➤ ಇಲ್ಲಿದೆ ಸುಲಭ ಉಪಾಯ

 

 

error: Content is protected !!
Scroll to Top