ಕ್ಷುಲ್ಲಕ ಕಾರಣಕ್ಕಾಗಿ ಹೋಟೆಲ್ ಮಾಲೀಕ ಮತ್ತು ಆತನ ಪತ್ನಿಗೆ ಥಳಿಸಿದ ದುಷ್ಕರ್ಮಿಗಳು..! ➤ ಆರೋಪಿಗಳನ್ನು ಬಂಧಿಸುವಂತೆ ಸ್ಥಳೀಯರು ಆಗ್ರಹ

(ನ್ಯೂಸ್ ಕಡಬ)Newskadaba.com ಕೇರಳ,ಮೇ.02 ಪಾನಮತ್ತರಾಗಿದ್ದ ದುಷ್ಕರ್ಮಿಗಳ ಗುಂಪು ಪತ್ತನಂತಿಟ್ಟದ ವೆನ್ನಿಕುಲಂ ಬಳಿಯ ಥಿಯೇಟರ್ ಬಳಿ ಎಂಜಿ ಹೋಟೆಲ್ ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದ ಮುರುಗನ್ ಮತ್ತು ಅವರ ಪತ್ನಿಯನ್ನು ಮೂವರ ತಂಡವು ಅಮಾನುಷವಾಗಿ ಥಳಿಸಿದೆ. ಬಳಿಕ 15 ನಿಮಿಷದ ನಂತರ ವಾಪಸ್ ಇಬ್ಬರನ್ನು ಕರೆದುಕೊಂಡು ಬಂದ ಆರೋಪಿ ಆರ್ಡರ್ ಮಾಡಿದ ಪರೋಟ ನೀಡುವಂತೆ ಕೇಳಿದ್ದಾನೆ.

ಪಾರ್ಸೆಲ್ ತಂದು ಕೊಟ್ಟಾಗ ಅದು ಬಿಸಿಯಾಗಿಲ್ಲ ಇನ್ನೊಂದು ಕೊಡು ಎಂದು ಕೇಳಿದ್ದಾನೆ.
ಆಗ ಹೋಟೆಕ್ ಮಾಲೀಕ ಪರೋಟ ಈಗ ಮಾಡಿದ್ದು ಬಿಸಿಯಾಗಿದೆ ಎಂದು ಹೇಳಿದ್ದಾನೆ, ಇದಕ್ಕೆ ರೊಚ್ಚಿಗೆದ್ದ ಆರೋಪಿಗಳು ಹೋಟೆಲ್ ಮಾಲೀಕನಿಗೆ ಮನಸೋಇಚ್ಛೆ ಥಳಿಸಿದ್ದಾರೆ.

Also Read  ಎಸ್.ಪಿ.ಬಿ ಆರೋಗ್ಯದಲ್ಲಿ ಮತ್ತೆ ಏರುಪೇರು

ಹೋಟೆಲ್ ಮಾಲೀಕ ಮುರುಗನ್ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದು, ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಹೋಟೆಲ್ ಮಾಲೀಕರಿಗೆ ಹಲ್ಲೆ ಮಾಡಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದುಷ್ಕರ್ಮಿಗಳ ವಿರುದ್ಧ ಆಕ್ರೋಶ ವ್ಯಕಗ್ತವಾಗಿದ್ದು, ಆರೋಪಿಗಳನ್ನು ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

 

error: Content is protected !!
Scroll to Top