ಹೃದಯವಿದ್ರಾಹಕ ಘಟನೆ ➤ ಮನೆಗೆ ಹೊತ್ತಿಕೊಂಡ ಬೆಂಕಿ ಮಲಗಿದ್ದಲ್ಲೇ ನಾಲ್ವರು ಬಾಲಕಿಯರು ಸುಟ್ಟು ಕರಕಲು

(ನ್ಯೂಸ್ ಕಡಬ) newskadaba.com, ಬಿಹಾರ, ಮೇ.2.  ಮನೆಗಳಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ, ಮನೆಯಲ್ಲಿ ಮಲಗಿದ್ದ ನಾಲ್ವರು ಬಾಲಕಿಯರು ಸುಟ್ಟು ಕರಕಲಾಗಿ 6 ಮಂದಿ ಗಾಯಗೊಂಡಿರುವ ಹೃದಯವಿದ್ರಾಹಕ ಘಟನೆ ಮುಜಾಫರ್‌ಪುರ ಜಿಲ್ಲೆಯ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮನೆಯಲ್ಲಿ ಮಲಗಿದ್ದ ನರೇಶ್ ರಾಮ್ ಅವರ ಪುತ್ರಿ ಸೋನಿ ಕುಮಾರಿ (15), ಅಮೃತಾ ಕುಮಾರಿ (12), ಕವಿತಾ ಕುಮಾರಿ (8) ಮತ್ತು ಶಿವಾನಿ ಕುಮಾರಿ (6) ಸುಟ್ಟು ಕರಕಲಾಗಿದ್ದಾರೆ.

Also Read  ಫೆ.17 ರಂದು 2023-24ನೇ ಸಾಲಿನ ಬಜೆಟ್ ಮಂಡನೆ ಸಾಧ್ಯತೆ..! ➤ ಸಿಎಂ ಬೊಮ್ಮಾಯಿ

ಸದರ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಮದಯಾಳು ಠಾಣೆ ಬಳಿಯ ಗುಡಿಸಲಿನಂತಿರುವ ಮನೆಯಲ್ಲಿ ಬೆಳಗಿನ‌ ಜಾವ ಅಗ್ನಿ ಅನಾಹುತ ಸಂಭವಿಸಿದೆ.ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.

error: Content is protected !!
Scroll to Top