ಎಂಟಿಬಿ ನಾಗರಾಜ್ ವ್ಯಂಗ್ಯಕ್ಕೆ ಕಿಡಿಕಾರಿದ ಶಾಸಕ ಶರತ್ ಬಚ್ಚೇಗೌಡ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.02 ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಹೊಸಕೋಟೆಯ ಪಾರ್ವತಿಪುರದಲ್ಲಿ ಶರತ್ ಬಚ್ಚೇಗೌಡ ಪರ ಚುನಾವಣ ಅಪ್ರಚಾರಕ್ಕೆ ಪತ್ನಿ ಪ್ರತಿಭಾ ಆಗಮಿಸಿದ್ದ ವೇಳೆ ಬ್ಯಾಗ್ ಹಾಗೂ ಮೊಬೈಲ್ ಕಳ್ಳತನವಾಗಿದ್ದಕ್ಕೆ ಪ್ರತಿಭಾ ಕಣ್ಣೀರಿಟ್ಟಿದ್ದರು.

ಈ ಬಗ್ಗೆ ಸಚಿವ ಎಂಟಿಬಿ ನಾಗರಾಜ್ ಚುನಾವಣಾ ಪ್ರಚಾರದ ವೇಳೆ ಅಣಕಿಸಿ, ವ್ಯಂಗ್ಯವಾಡಿದ್ದರು. ಸಚಿವರ ನಡೆಗೆ ಶರತ್ ಬಚ್ಚೆಗೌಡ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಸಚಿವ ಎಂಟಿಬಿ ವಿರುದ್ಧ ಕಿಡಿಕಾರಿರುವ ಶಾಸಕ ಶರತ್ ಬಚ್ಚೇಗೌಡ ಓರ್ವ ಹೆಣ್ಣುಮಗಳು ಘಟನೆಯಿಂದ ಗಾಬರಿಯಾಗಿ ಕಣ್ಣೀರಿಟ್ಟರೆ ಅದನ್ನು ಅಣಕಿಸಿ ಪುಂಡರ ನಡುವೆ ಮನರಂಜನೆ ಮಾಡುತ್ತಿದ್ದಾರಾ? ಎಂದು ಕೆಂಡಾಮಂಡಲರಾಗಿದ್ದಾರೆ.

Also Read  ಕರ್ನಾಟಕದಲ್ಲಿ ಇನ್ನಷ್ಟು ನಗರಗಳಿಗೆ ಎಲೆಕ್ಟ್ರಿಕ್ ಬಸ್ ಸೇವೆ ಆರಂಭ       

 

 

error: Content is protected !!
Scroll to Top