(ನ್ಯೂಸ್ ಕಡಬ) newskadaba.com ಕಡಬ, ಜ.14. ಪುತ್ತೂರು ವಿವೇಕಾನಂದ ಇಂಜೀನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ದೀಪಕ್ ಕೆ.ಟಿ ಅವರಿಗೆ ಬೆಂಗಳೂರು ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ವಿಶ್ವವಿದ್ಯಾಲಯ ಪಿ.ಎಚ್.ಡಿ ಪದವಿ ನೀಡಿದೆ.
ಸುಳ್ಯ ಕೆ.ವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಡಾ|ಜ್ಞಾನೇಶ್ ಅವರ ಮಾರ್ಗದರ್ಶನದಲ್ಲಿ ದೀಪಕ್ ಅವರು ಮಂಡಿಸಿರುವ ಇನ್ವೆಸ್ಟಿಗೇಷನ್ ಆನ್ ಡೆನ್ಸಿಫೈಡ್ ಬಂiೆÆೕಮಾಸ್ ಬ್ರಿಕೇಟ್ ಡೆವಲಪ್ಡ್ ಯೂಸಿಂಗ್ ಅರೆಕನಟ್ ಲೀವ್ಸ್ ಆ್ಯಂಡ್ ಕೋಕನಟ್ ಲೀವ್ಸ್ ಆ್ಯಸ್ ಎ ಸೋರ್ಸ್ ಆಫ್ ರಿನ್ಯೂವೆಬೆಲ್ ಎನರ್ಜಿ ಎಂಬ ಮಹಾ ಪ್ರಬಂಧಕ್ಕೆ ಪಿಎಚ್ಡಿ ಪದವಿ ಪ್ರಧಾನ ಮಾಡಲಾಗಿದೆ.
ಮಂಗಳೂರಿನ ಕೆನರಾ ಕಾಲೇಜು ಹಾಗೂ ಪುತ್ತೂರು ಫಿಲೋಮಿನಾ ಕಾಲೇಜಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಮುಗಿಸಿರುವ ದೀಪಕ್ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಮುಗಿಸಿರುತ್ತಾರೆ. ಸುಳ್ಯದ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ & ಎಮ್ಟೆಕ್ ಪದವಿ ಪಡೆದು ಆರಂಭದಲ್ಲಿ ಮಂಗಳೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಪ್ರಾರಂಭಿಸಿ, ಕಳೆದ ಹನ್ನೊಂದು ವರ್ಷಗಳಿಂದ ವಿವೇಕಾನಂದ ಇಂಜೀನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಸುಳ್ಯ ತಾಲೂಕಿನ ಐರ್ವನಾಡು ಗ್ರಾಮದ ಕತ್ಲಡ್ಕ ನಿವಾಸಿಗಳಾದ ವಿಜಯ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಕೆ.ಬಾಲಕೃಷ್ಣ ಗೌಡ ಹಾಗೂ ರುಕ್ಮಿಣಿ ಬಾಲಕೃಷ್ಣ ಗೌಡ ಅವರ ಸುಪುತ್ರ. ಪ್ರಸ್ತುತ ಇವರು ಪುತ್ತೂರು ತಾಲೂಕು ರಾಮಕುಂಜ ಗ್ರಾಮದ ಕೊಂಡ್ಯಾಡಿಯಲ್ಲಿ ವಾಸವಾಗಿದ್ದಾರೆ.