ಅನಾರೋಗ್ಯದಿಂದ ಬಳಲುತ್ತಿದ್ದ ಮಹಾತ್ಮ ಗಾಂಧಿ ಮೊಮ್ಮಗ ಅರುಣ್ ಗಾಂಧಿ ವಿಧಿವಶ..!

(ನ್ಯೂಸ್ ಕಡಬ)Newskadaba.com ಮಹಾರಾಷ್ಟ್ರ,ಮೇ.02 ಮಹಾತ್ಮ ಗಾಂಧಿಯವರ ಮೊಮ್ಮಗ ಅರುಣ್ ಗಾಂಧಿ ವಿಧಿವಶರಾಗಿದ್ದಾರೆ. 89 ವರ್ಷದ ಅರುಣ್ ಗಾಂಧಿ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಅರುಣ್ ಗಾಂಧಿ ಇಂದು ಬೆಳಿಗ್ಗೆ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅರುಣ್ ಗಾಂಧಿಯವರ ಅಂತ್ಯ ಸಂಸ್ಕಾರ ಕೊಲ್ಲಾಪುರದಲ್ಲಿ ಇಂದೇ ನಡೆಯಲಿದೆ ಎಂದು ಅವರ ಪುತ್ರ ತುಷಾರ್ ಗಾಂಧಿ ತಿಳಿಸಿದ್ದಾರೆ.ಮಹಾತ್ಮ ಗಾಂಧಿಯವರ ಪುತ್ರ ಮಣಿಲಾಲ್ ಗಾಂಧಿ ಹಾಗೂ ಸುಶೀಲ ದಂಪತಿಯ ಪುತ್ರನಾಗಿ ಏಪ್ರಿಲ್ 14, 1934 ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬಾನ್ ನಲ್ಲಿ ಅರುಣ್ ಗಾಂಧಿ ಜನಿಸಿದ್ದರು. ತಮ್ಮ ತಾತ ಮಹಾತ್ಮ ಗಾಂಧಿಯವರ ಹಾದಿಯಲ್ಲಿ ನಡೆದಿದ್ದ ಅರುಣ್ ಗಾಂಧಿ ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರು.

Also Read  ಡಿಸೆಂಬರ್ ತಿಂಗಳ ವೇಳೆಗೆ ಮೊದಲ ಗಗನಯಾನ- ಇಸ್ರೋ

 

error: Content is protected !!
Scroll to Top