ಶಾಲೆಯೊಂದರಲ್ಲಿ ನೀಗೂಡವಾಗಿ ಮೃತಪಟ್ಟ ಐವರು ಶಿಕ್ಷಕರು..!

(ನ್ಯೂಸ್ ಕಡಬ)Newskadaba.com ಛತ್ತೀಸ್ ಗಢ,ಮೇ.02 ಎರಡು ವರ್ಷಗಳ ಅವಧಿಯಲ್ಲಿ ಒಂದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಐವರು ಶಿಕ್ಷಕರು ಮೃತಪಟ್ಟಿದ್ದು ಇದೀಗ ಶಾಲೆಯನ್ನೇ ಮುಚ್ಚಿರುವ ಘಟನೆ ಛತ್ತೀಸ್​ಗಢದ ಮಾನೇಂದ್ರಗಢ ಚಿರ್ಮಿರಿ ಭರತಪುರ ಜಿಲ್ಲೆಯಲ್ಲಿ ನಡೆದಿದೆ. ಖಡ್ಗವಾನ್ ಬ್ಲಾಕ್‌ನ ಸಾವ್ಲಾ ಗ್ರಾಮ ಪಂಚಾಯಿತಿಯ ಬಸೆಲ್‌ಪುರದ ಸಾವಳ ಗ್ರಾಮದ ಸರ್ಕಾರಿ ಪೂರ್ವ ಮಾಧ್ಯಮಿಕ ಶಾಲೆಯಲ್ಲಿ ಈ ಬೆಳಣಿಗೆ ವರದಿಯಾಗಿದೆ.

ಎರಡು ವರ್ಷಗಳ ಅಂತರದಲ್ಲಿ ಈ ಶಾಲೆಯಲ್ಲಿದ್ದ 5​​ ಶಿಕ್ಷಕರು ಮೃತಪಟ್ಟಿದ್ದಾರೆ.ಎರಡು ವರ್ಷಗಳ ಅಂತರದಲ್ಲಿ ನಡೆದ ಈ​​ ಶಿಕ್ಷಕರ ಸರಣಿ ಮೃತ್ಯುವಿನ ಕುರಿತ ಮೂಢನಂಬಿಕೆಯ ಭೀತಿಯಿಂದ ಶಾಲೆಗೆ ಬೀಗ ಜಡಿಯಲಾಗಿದೆ.ಇಲ್ಲಿ ಕೆಲಸ ಮಾಡುತ್ತಿದ್ದ ಉಳಿದ ಓರ್ವ ಶಾಲಾ ಸಿಬ್ಬಂದಿ ರಜೆ ಮೇಲೆ ತೆರಳಿದ್ದಾರೆ.

Also Read  ಬಾಬರಿ ಮಸೀದಿ ಧ್ವಂಸ ಪ್ರಕರಣ ➤ ಇಂದು ತೀರ್ಪು ಪ್ರಕಟ

ಬಸೆಲ್‌ಪುರ ಗ್ರಾಮದ ಮೊದಲು ಜನರು ಯಾವುದೇ ಆತಂಕವಿಲ್ಲದೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಲ್ಲಿ ಈ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಐವರುಮೃತಪಟ್ಟಿದ್ದಾರೆ.ಈ ಸಾವುಗಳಿಂದ ಶಾಲೆಗೆ ಬರುವ ಮಕ್ಕಳ ಮನದಲ್ಲಿ ಭಯ ಆವರಿಸಿದೆ.

 

error: Content is protected !!
Scroll to Top