ಬಾಟಲಿಯ ಮುಚ್ಚಲ ತೆಗೆಯುವಾಗ ಗಂಟಲಿಗೆ ಸಿಲುಕಿ ಬಾಲಕ ಮೃತ್ಯು.!

(ನ್ಯೂಸ್ ಕಡಬ)Newskadaba.com ಕುಷ್ಟಗಿ,ಮೇ.02 ಸಿಹಿತಿಂಡಿ ಬಾಟಲಿಯ ಮುಚ್ಚಲ ತೆಗೆಯುವಾಗ ಗಂಟಲಿಗೆ ಸಿಲುಕಿ ಬಾಲಕ ಮೃತಪಟ್ಟ ಘಟನೆ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ.ಹೆಬ್ಬೆರೆಳು ಗಾತ್ರದ ಜೇಮ್ಸ್ ಗಾಜಿನ ಬಾಟಲಿ ಗಂಟಲಲ್ಲಿ‌ ಸಿಲುಕಿ ಬಾಲಕ ಮೃತಪಟ್ಟಿದ್ದಾನೆ.ಕುಷ್ಟಗಿಯ ಮದಿನಾ ಗಲ್ಲಿಯ ನಿವಾಸಿ ರಬ್ಬಾನಿ ಬಾಗೇವಾಡಿ ಅವರ ಮಗ ಮಹ್ಮದ್ ಅಹ್ಮದ್ ರಬ್ಬಾನಿ ಬಾಗೇವಾಡಿ ಮೃತ ಬಾಲಕ‌.

ಬಾಲಕ 1ರೂ.ಗೆ ಸಿಹಿ ತಿನಿಸು ಜೇಮ್ಸ್‌ ಬಾಟಲಿ ಖರೀದಿಸಿದ್ದು ಅದರ ಮುಚ್ಚಳ ಬಾಯಿಂದ ತೆಗೆಯುವಾಗ ಗಂಟಲಿನ ಅನ್ನನಾಳದಲ್ಲಿ ಅಡ್ಡ ಸಿಲುಕಿ ಅಸ್ವಸ್ಥಗೊಂಡಿದ್ದ. ಬಾಲಕನಿಗೆ ಕೂಡಲೇ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರಾದರೂ ಮಾರ್ಗ ಮದ್ಯೆ ಬಾಲಕ ಕೊನೆಯುಸಿರೆಳೆದಿದ್ದಾನೆ ಎಂದು ವರದಿಯಾಗಿದೆ. ಬಾಲಕನ ಸಾವಿನಿಂದ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.

Also Read  ಬಿಸ್ಕೆಟ್ ಕೊಡಿಸುವುದಾಗಿ ನಂಬಿಸಿ ಬಾಲಕಿಯ ಅತ್ಯಾಚಾರ  - ಕಾರ್ಮಿಕನ ಬಂಧನ !!

 

 

 

 

error: Content is protected !!
Scroll to Top