ಯುವಕನಿಗೆ ಚಾಕುವಿನಿಂದ ಇರಿದ ಮದ್ಯವ್ಯಸನಿ ಮಹಿಳೆ.!

(ನ್ಯೂಸ್ ಕಡಬ)Newskadaba.com ಬೆಳಗಾವಿ,ಮೇ.02 ಆತ ಚಿಕ್ಕವನಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದು, ತಂದೆ ಪಾರ್ಶ್ವವಾಯುದಿಂದಾಗಿ ಹಾಸಿಗೆ ಹಿಡಿದಿದ್ದರು. ಕೆಲಸ ಅರಸಿ ಊರು ಬಿಟ್ಟು ಬೇರೆ ರಾಜ್ಯಕ್ಕೆ ತೆರಳಿದ್ದ ಆತ ಗ್ರಾಮದಲ್ಲಿ ನಡೆಯಯತ್ತಿದ್ದ ಜಾತ್ರೆಗೆ ಎಂದು ಬಂದಿದ್ದನು. ಜೊತೆಗೆ ಜಾತ್ರೆಗೆ ಹೊಸ ಬಟ್ಟೆ ಖರೀದಿಸಬೇಕೆಂದು ಸಿಟಿಗೆ ಹೋದಾತ ಹೆಣವಾಗಿ ಊರಿಗೆ ಮರಳಿದ್ದಾನೆ.

ಬೆಳಗಾವಿಯ ಕಂಗ್ರಾಳಿ ಕೆ.ಹೆಚ್.ಗ್ರಾಮದ ನಿವಾಸಿಯಾಗಿರುವ ಅಂದಾಜು 40 ವರ್ಷದ ಜಯಶ್ರೀ ಪವಾರ್ ಎಂಬುವವರು ನಾಗರಾಜ್ ಬಳಿ ಬಂದು ಮೊಬೈಲ್ ನೀಡು ಮೊಬೈಲ್ ನೀಡು ಎಂದು ಕೇಳಿದ್ದಾಳಂತೆ. ಆಗ ಗಾಬರಿಗೊಂಡ ನಾಗರಾಜ್ ಯಾವ ಮೊಬೈಲ್ ಎಂದು ಪ್ರಶ್ನೆ ಮಾಡಿದ್ದಾನೆ.

Also Read  ಮುಖ್ಯರಸ್ತೆ ಮೇಲೆಯೇ ರಾತ್ರೋರಾತ್ರಿ ಮನೆ ನಿರ್ಮಾಣ!!

ಅಷ್ಟೇ ಕೈಯಲ್ಲಿದ್ದ ಚಾಕುವಿನಿಂದ ನಾಗರಾಜ್​ನ ಎದೆಗೆ ಚುಚ್ಚಿದ್ದಾಳೆ. ಈ ವೇಳೆ ರಕ್ತದ ಮಡುವಿನಲ್ಲಿ ಕುಸಿದು ಬಿದ್ದ ನಾಗರಾಜ್​ನನ್ನು ಸ್ನೇಹಿತರು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಾಗರಾಜ್ ರಾಗಿ ಪಾಟೀಲ್ ಮೃತಪಟ್ಟಿದ್ದಾರೆ.

 

error: Content is protected !!
Scroll to Top