ಐರಾವತ ಬಸ್ ಅಪಘಾತದಲ್ಲಿ ಮೃತರ ಕುಟುಂಬಕ್ಕೆ ತಲಾ 3 ಲಕ್ಷ ಪರಿಹಾರ ► ಸಾರಿಗೆ ಸಚಿವ ಎಚ್.ಎಂ. ರೇವಣ್ಣ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.13. ಶನಿವಾರ ಬೆಳಗ್ಗಿನ ಜಾವ ಹಾಸನದ ಶಾಂತಿಗ್ರಾಮದಲ್ಲಿ ನಡೆದ ಕೆಎಸ್ಸಾರ್ಟಿಸಿ ಐರಾವತ ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 3 ಲಕ್ಷ ರೂ.ಪರಿಹಾರ ನೀಡಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ.

ಅಪಘಾತದಲ್ಲಿ ಅಲ್ಲದೆ, ಗಾಯಗೊಂಡಿರುವ ಎಲ್ಲ ಪ್ರಯಾಣಿಕರ ವೈದ್ಯಕೀಯ ವೆಚ್ಚವನ್ನು ನಿಗಮದಿಂದಲೇ ಭರಿಸಲಾಗುವುದು. ಅಲ್ಲದೆ, ಮೃತರ ವಾರಸುದಾರರಿಗೆ ನಿಗಮದಿಂದ ತಲಾ 15 ಸಾವಿರ ರೂ. ಮಧ್ಯಂತರ ಪರಿಹಾರವನ್ನು ಈಗಾಗಲೇ ವಿತರಣೆ ಮಾಡಲಾಗಿದೆ ಎಂದಿದ್ದಾರೆ. ಅಪಘಾತ ಸಂಭವಿಸುವ ಸಂದರ್ಭದಲ್ಲಿ ವಾಹನದ ವೇಗವು ಪ್ರತಿ ಗಂಟೆಗೆ 59 ಕಿ.ಮೀ.ಗಳಲ್ಲಿ ಇತ್ತೆನ್ನುವುದು ವಿಟಿಎಂಎಸ್ ಪರಿಶೀಲಿಸಿದಾಗ ತಿಳಿದುಬಂದಿದೆ. ವಾಹನದ ಅರ್ಹತಾ ಪತ್ರದ ಅವಧಿಯು 2018 ಎಪ್ರಿಲ್ ತಿಂಗಳವರೆಗೆ ಇತ್ತು ಎಂದು‌ ಸಚಿವರು ತಿಳಿಸಿದ್ದಾರೆ.

Also Read  ಮಡಿಕೇರಿ :ನಿವೃತ್ತಿಯಾದ ಒಂದೇ ತಿಂಗಳಿನಲ್ಲಿ ASI ಅತ್ಮಹತ್ಯೆ

error: Content is protected !!
Scroll to Top