(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.29. ಅಪ್ರಾಪ್ತ ಮಗುವನ್ನು ಪತಿಯ ಸುಪರ್ದಿಗೆ ನೀಡುವಂತೆ ಹೈಕೋರ್ಟ್ ಆದೇಶಿಸಿತ್ತು. ಆದ್ರೇ ಮಹಿಳೆ ಈ ಆದೇಶ ಪಾಲಿಸಿರಲಿಲ್ಲ. ಹೀಗಾಗಿ ಮಹಿಳೆಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.
ಹೈಕೋರ್ಟ್ ನ್ಯಾಯಪೀಠವು ಮಗುವಿನ ನೆಮ್ಮದಿ ಹಾಗೂ ತಾಯಿಯೊಂದಿಗಿನ ಭಾವನಾತ್ಮಕಯನ್ನಷ್ಟೇ ನ್ಯಾಯಾಲಯ ಪರಿಗಣಿಸಬಾರದು.
ಮಗು ಬೆಳೆಯುವ ವಾತಾವರಣ, ಆರೈಕೆ ಮತ್ತು ವಾತ್ಸಲ್ಯವನ್ನು ಪರಿಗಣಿಸಬೇಕಾಗುತ್ತದೆ ಎಂಬುದಾಗಿ ಅಭಿಪ್ರಾಯ ಪಟ್ಟಿತ್ತು. ಸಲ್ಲಿಸಾಗಿದ್ದಂತ ಮಹಿಳೆಯ ಅರ್ಜಿಯನ್ನು ವಜಾಗೊಳಿಸಿ, ಮಗುವನ್ನು ತಂದೆ ವಶಕ್ಕೆ ನೀಡುವಂತೆ ಕೌಟುಂಬಿಕ ಕೋರ್ಟ್ ನೀಡಿದ್ದಂತ ಆದೇಶವನ್ನು ಎತ್ತಿ ಹಿಡಿದಿತ್ತು.