(ನ್ಯೂಸ್ ಕಡಬ)newskadaba.com ಮಂಗಳೂರು, ಏ.29. ಭೂಗೋಳದ ದಕ್ಷಿಣ ಭಾಗದಲ್ಲಿ ಕಾಣಸಿಗುವ ಸೂಟಿ ಶಿಯರ್ ವಾಟರ್ ಪಕ್ಷಿಯು ಭಾರತದಲ್ಲೇ ಮೊದಲ ಬಾರಿಗೆ ಮಂಗಳೂರಿನ ಕರಾವಳಿ ಭಾಗದ ಸಮುದ್ರದಲ್ಲಿ ಕಾಣಿಸಿಕೊಂಡಿದೆ.
ಸಮುದ್ರದ ಪಕ್ಷಿಗಳನ್ನು ವೀಕ್ಷಿಸಿ ದಾಖಲು ಮಾಡುವ ಕರಾವಳಿ ಬರ್ಡ್ ವಾಚರ್ ನೆಟ್ ವರ್ಕ್ ಇದೇ ಮೊದಲ ಬಾರಿಗೆ ಭಾರತಲ್ಲಿ ಸೂಟಿಶಿಯರ್ ವಾಟರ್ ಎಂಬ ಅಪರೂಪದ ಪಕ್ಷಿಯನ್ನ ಪತ್ತೆ ಮಾಡಿದ್ದು, ಈ ತಂಡದ ಸದಸ್ಯರು ಪ್ರತಿ ವರ್ಷವು ಸಮುದ್ರ ಪಕ್ಷಿಗಳ ಸಮೀಕ್ಷೆ ನಡೆಸುತ್ತಾರೆ.