ಬ್ಯೂಟಿ ಪಾರ್ಲರ್‌ಗೆ ಹೋಗದಂತೆ ಪತ್ನಿಯನ್ನು ತಡೆದ ಪತಿ..! ➤ಫ್ಯಾನ್‌ಗೆ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ)Newskadaba.com ಹೊಸದಿಲ್ಲಿ,ಏ.29 ಬ್ಯೂಟಿ ಪಾರ್ಲರ್‌ಗೆ ಹೋಗದಂತೆ ಪತಿ ತಡೆದದ್ದಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಇಂಧೋರ್‌ನಲ್ಲಿ ಬೆಳಕಿಗೆ ಬಂದಿದೆ.ಇಂಧೋರ್‌ನ ಸ್ಕೀಂ ನಂ. 51 ಪ್ರದೇಶದಲ್ಲಿ ಈ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಸಬ್‌ಇನ್‌ಸ್ಪೆಕ್ಟರ್ ಉಮಾಶಂಕರ್ ಯಾದವ್ ಹೇಳಿದ್ದಾರೆ.

“ಮಹಿಳೆ ಬ್ಯೂಟಿ ಪಾರ್ಲರ್‌ಗೆ ಹೋಗದಂತೆ ತಡೆದ ಕಾರಣಕ್ಕೆ ಫ್ಯಾನ್‌ಗೆ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪತಿ ಹೇಳಿಕೆ ನೀಡಿದ್ದಾರೆ.ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಎಲ್ಲ ಆಯಾಮಗಳಿಂದ ತನಿಖೆ ನಡೆಯುತ್ತಿದೆ” ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

Also Read  ತೆಲುಗು ಟೈಟಾನ್ಸ್‌ ತಂಡವನ್ನು ಬೇಟೆಯಾಡಿದ ಬೆಂಗಳೂರು ಬುಲ್ಸ್

 

 

 

error: Content is protected !!
Scroll to Top