ಬೆಳ್ತಂಗಡಿ: 9ನೇ ತರಗತಿಯ ಬಾಲಕ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಏ.29. ತಾಲೂಕು ಪಂಚಾಯತ್ ಕ್ವಾಟ್ರಸ್ ನಲ್ಲಿ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.


ಚಿತ್ರದುರ್ಗದಲ್ಲಿ 9ನೇ ತರಗತಿ‌ ಓದುತ್ತಿದ್ದ ಬಾಲಕ ಶಿವಪ್ರಸಾದ್(15) ಆತ್ಮಹತ್ಯೆ ಮಾಡಿಕೊಂಡ ಬಾಲಕ ಎಂದು ಗುರುತಿಸಲಾಗಿದೆ. ‌ಶಿವಪ್ರಸಾದ್ ಶಾಲೆಗೆ ರಜೆ ಹಿನ್ನೆಲೆ ದೊಡ್ಡಮ್ಮ ಮಂಜುಳ ಎಂಬವರ ಬೆಳ್ತಂಗಡಿಯ ಮನೆಗೆ ಬಂದಿದ್ದರು. ಮಂಜುಳಾ ಅವರು ಬೆಳ್ತಂಗಡಿಯ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ತಾಲೂಕು ಪಂಚಾಯತ್ ಪಕ್ಕದ ಸರಕಾರಿ ಕ್ವಾಟ್ರಸ್ ನಲ್ಲಿ ವಾಸವಿದ್ದರು. ಇಂದು‌ ಮಂಜುಳ ಕೆಲಸಕ್ಕೆ ಹೋಗಿದ್ದರು. ಅವರ ಮಗಳು ಮತ್ತು ಮಗ ಕೂಡ ಮನೆಯಲ್ಲಿ ಇರಲಿಲ್ಲ. ಈ ವೇಳೆ ಶಿವಪ್ರಸಾದ್ ಒಬ್ಬನೇ ಮನೆಯಲ್ಲಿ ಇದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಕೆಲಸದಿಂದ‌ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

Also Read  ಕಡಬ: ವರ್ಷ ಕಳೆದರೂ ದುರಸ್ತಿ ಆಗದ ಬೀದಿದೀಪ ಹಾಗೂ ಬೀದಿನಾಯಿಗಳ ಅಟ್ಟಹಾಸಕ್ಕೆ ಸಿಗದ ಪರಿಹಾರ ➤ ಸೂಕ್ತ ಕ್ರಮಕ್ಕೆ ಎಸ್ಡಿಪಿಐ ಆಗ್ರಹ

 

error: Content is protected !!
Scroll to Top