(ನ್ಯೂಸ್ ಕಡಬ)Newskadaba.com ಕೊಟ್ಟಾಯಂ,ಏ.29 ಗೂಳಿಯನ್ನು ಮೇಯಿಸಲು ಹೊಲಕ್ಕೆ ಹೋದಾಗ ತನ್ನದೇ ಗೂಳಿಯ ದಾಳಿಯಿಂದ ವ್ಯಕ್ತಿಯೊಬ್ಬ ದುರಂತ ಸಾವಿಗೀಡಾಗಿರುವ ಆತಂಕಕಾರಿ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯ ಪೊಂಕುನ್ನಂ ಚಮಂಪತಲ್ನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ರೆಜಿ ಜಾರ್ಜ್ (60) ಎಂದು ಗುರುತಿಸಲಾಗಿದೆ.ಆತನ ಪತ್ನಿ ಡಾರ್ಲಿ (52) ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಪಲಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.