ಹೈಕೋರ್ಟ್ ಆದೇಶ ಪಾಲಿಸದ ಮಹಿಳೆಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.29 ಅಪ್ರಾಪ್ತ ಮಗುವನ್ನು ಪತಿಯ ಸುಪರ್ದಿಗೆ ನೀಡುವಂತೆ ಹೈಕೋರ್ಟ್ ಆದೇಶಿಸಿತ್ತು. ಆದ್ರೇ ಮಹಿಳೆ ಈ ಆದೇಶ ಪಾಲಿಸಿರಲಿಲ್ಲ. ಹೀಗಾಗಿ ಮಹಿಳೆಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.ಮಗು ಬೆಳೆಯುವ ವಾತಾವರಣ, ಆರೈಕೆ ಮತ್ತು ವಾತ್ಸಲ್ಯವನ್ನು ಪರಿಗಣಿಸಬೇಕಾಗುತ್ತದೆ ಎಂಬುದಾಗಿ ಅಭಿಪ್ರಾಯ ಪಟ್ಟಿತ್ತು. ಅಲ್ಲದೇ ಮಹಿಳೆಯ ಅರ್ಜಿಯನ್ನು ವಜಾಗೊಳಿಸಿ, ಮಗುವನ್ನು ತಂದೆ ವಶಕ್ಕೆ ನೀಡುವಂತೆ ಕೌಟುಂಬಿಕ ಕೋರ್ಟ್ ನೀಡಿದ್ದಂತ ಆದೇಶವನ್ನು ನೀಡಿತ್ತು.

ಹೈಕೋರ್ಟ್ ಅಪ್ರಾಪ್ತ ಮಗುವನ್ನು ಪತಿ ಸುಪರ್ದಿಗೆ ನೀಡುವಂತೆ ಆದೇಶಿಸಿದ್ದಂತ ಆದೇಶವನ್ನು ಪತ್ನಿ ನಿರಾಕರಿಸಿದ್ದಳು. ಅರ್ಜಿಯ ಮುಂದಿನ ವಿಚಾರಣೆ ವೇಳೆ ಮಹಿಳೆಯನ್ನು ಪೊಲೀಸ್ ಆಯುಕ್ತರು ಕೋರ್ಟ್ ಮುಂದೆ ಹಾಜರುಪಡಿಸಬೇಕು. ಆ ವೇಳೆ ಮಗುವೂ ಜತೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಎಲ್ಲಾ ಸುರಕ್ಷತಾ ಕ್ರಮಗಳ್ನು ಪೊಲೀಸರು ಕೈಗೊಳ್ಳಬೇಕು ಎಂಬುದಾಗಿ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿತು.

Also Read  ಸಂತ್ರಸ್ಥೆ ನೀಡುವ ಹೇಳಿಕೆಯನ್ನು ಅದೇ ರೀತಿ ದಾಖಲಿಸಿಕೊಳ್ಳಬೇಕು ➤ ರೋಹಿತ್ ಸಿ.ಜಿ

 

 

error: Content is protected !!
Scroll to Top