ಮೀನು ಹಿಡಿಯಲು ತೆರಳಿದ್ದ ಬಾಲಕರಿಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

(ನ್ಯೂಸ್ ಕಡಬ) newskadaba.com ವಿಜಯಪುರ, ಜ.13. ಮೀನು ಹಿಡಿಯಲೆಂದು ತೆರಳಿದ್ದ ಬಾಲಕರಿಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ದೊಡ್ಡ ಕೆರೆಯಲ್ಲಿ ಶನಿವಾರದಂದು ನಡೆದಿದೆ.

ಪಟ್ಟಣದ ಆಶ್ರಯ ಕಾಲನಿ ನಿವಾಸಿ ಲೋಕೇಶ ನಾಗರಾಜ ಗಣಪ (೧೨ ) ಮೃತಪಟ್ಟಿದ್ದು ಆತನ ಶವ ಪತ್ತೆ ಮಾಡಲಾಗಿದೆ. ಇನ್ನೋರ್ವ ಬಾಲಕನ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ‌. ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಕೆರೆಗಿಳಿದು ಕಾರ್ಯಾಚರಣೆ ನಡೆಸದೇ ಅತ್ಯಾಧುನಿಕ ರಕ್ಷಣಾ ಸಾಮಗ್ರಿಗಳಿಲ್ಲದೇ ಮೃತ ದೇಹದ ಶೋಧ ಕಾರ್ಯ ವಿಳಂಬಗೊಂಡಿದೆ.

ಸ್ಥಳಕ್ಕೆ ತಹಸೀಲ್ದಾರ್ ಎಂ.ಎಸ್ ಬಾಗವಾನ, ಸಿಪಿಐ ರವಿಕುಮಾರ ಕಪ್ಪತ್ತನವರ, ಅಗ್ನಿಶಾಮಕ ಠಾಣೆಯ ಅಧಿಕಾರಿ ರಾಜೇಂದ್ರ ಪೋದ್ದಾರ ಹಾಗೂ ಪುರಸಭೆ ಅಧ್ಯಕ್ಷ ಬಸನಗೌಡ ಪಾಟೀಲ, ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ ಭೇಟಿ ನೀಡಿದ್ದಾರೆ. ಮೃತ ಬಾಲಕರ ಕುಟುಂಬಕ್ಕೆ ರಾಜ್ಯ ಸರಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವುದಾಗಿ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಾಸಕರು ಸಿ.ಎಸ್.ನಾಡಗೌಡರು ತಿಳಿಸಿದ್ದಾರೆ‌.

Also Read  ಬೆಳಂದೂರು, ಪಳ್ಳತ್ತಾರು ಪರಿಸರದಲ್ಲಿ ನಿರಂತರ ಕಳ್ಳತನದ ಹಿನ್ನೆಲೆ ➤ ದಾರಿದೀಪ ಅಳವಡಿಸುವಂತೆ ಗ್ರಾ.ಪಂ ಗೆ ಮನವಿ

error: Content is protected !!
Scroll to Top