ಕಡಬ ಹೋಬಳಿ ಮಟ್ಟದ ಕೃಷಿ ಅಭಿಯಾನ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಸವಣೂರು, ಜೂ.19. ದ.ಕ. ಜಿಲ್ಲೆಯ ಕೃಷಿಕರು ಹೆಚ್ಚಾಗಿ ಸಹಕಾರಿ ಸಂಘಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ ಕೃಷಿಕರ ಹಿತದೃಷ್ಟಿಯಿಂದ ಸಹಕಾರಿ ಸಂಘಗಳು ಹೊಸ ಯೋಜನೆಗಳನ್ನು ರೂಪಿಸಿ, ಕೃಷಿಕರಿಗೆ ಸಹಕಾರಿಯಾಗಬೇಕೆಂದು ಸುಳ್ಯ ಶಾಸಕ ಎಸ್. ಅಂಗಾರ ಹೇಳಿದರು.

ಅವರು ಜೂ.17ರಂದು ಸವಣೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕರ್ನಾಟಕ ಸರಕಾರ ,ದ.ಕ.ಜಿ.ಪಂ ,ಕೃಷಿ ಇಲಾಖೆ ಇದರ ವತಿಯಿಂದ ನಡೆದ ಕಡಬ ಹೋಬಳಿಯ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಕೃಷಿ ಅಭಿಯಾನÀ ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ಕೂಲಿ ಕಾರ್ಮಿಕರ ಅಭಾವ ಕೃಷಿಕರನ್ನು ಕಾಡುತ್ತಿದೆ. ಈ ಸಮಸ್ಯೆಯನ್ನು ಹೋಗಲಾಡಿಸುವ ಸಲುವಾಗಿ ಕೃಷಿಕರು ಆಧುನಿಕ ಕೃಷಿ ಉಪಕರಣ ಹಾಗೂ ಸರಕಾರದಿಂದ ದೊರೆಯುವ ಸಲವತ್ತುಗಳನ್ನು ಉಪಯೋಗಿಸಿಕೊಂಡು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಅವರು ಅಭಿಪ್ರಾಯಪಟ್ಟರು. ಪುತ್ತೂರು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ನಯೀಮ್ ಹುಸೇನ್ ಮಾತನಾಡಿ ,ಕೃಷಿ ಪ್ರಧಾನ ದೇಶವಾಗಿದ್ದ ಭಾರತದಲ್ಲೀಗ ಆಹಾರಧಾನ್ಯಗಳ ಉತ್ಪಾದನೆ ಪ್ರಮಾಣ ಕುಂಠಿತವಾಗುತ್ತಿದೆ. ರೈತರು ಉಪಬೆಳೆಗಳಿಗೂ ಆದ್ಯತೆ ನೀಡುವ ಮೂಲಕ ಕೃಷಿಯಲ್ಲಿ ಆರ್ಥಿಕ ಹೊರೆ ಬೀಳದಂತೆ ನೋಡಿಕೊಳ್ಳಬೇಕು. ಎಲ್ಲ ರೀತಿಯಿಂದಲೂ ಸಂಪದ್ಭರಿತವಾಗಿದ್ದ ದ.ಕ. ಜಿಲ್ಲೆಯೂ ಇದೀಗ ಬರಪೀಡಿತ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದ್ದು, ಮಣ್ಣು-ನೀರಿನ ಸಂರಕ್ಷಣೆಯೊಂದಿಗೆ ಮತ್ತೆ ಫಲವತ್ತಾದ ಪ್ರದೇಶವನ್ನಾಗಿ ಮಾರ್ಪಡಿಸುವುದು ನಮ್ಮೆಲ್ಲರ ಕರ್ತವ್ಯವೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸವಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ಬಿ.ಕೆ. ಆರೋಗ್ಯಕರ ಆಹಾರ ಸೇವನೆಯೊಂದಿಗೆ ನಾವು ಆರೋಗ್ಯವಂತರಾಗಬೇಕು. ಈ ನಿಟ್ಟಿನಲ್ಲಿ ಸಾವಯವ ಕೃಷಿಗೆ ನಾವು ಒತ್ತು ನೀಡಬೇಕಾಗಿದೆ ಎಂದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಮೀಳಾ ಜನಾರ್ಧನ, ತಾಪಂ ಉಪಾಧ್ಯಕ್ಷೆ ರಾಜೇಶ್ವರಿ ಕೆ., ತಾಪಂ ಸದಸ್ಯರಾದ ಆಶಾ ಲಕ್ಷಣ್, ಗಣೇಶ್ ಗೌಡ ಕೈಕುರೆ ಉಪಸ್ಥಿತರಿದ್ದರು. ರೈತ ಬಾಂಧವರೊಂದಿಗೆ ಸಂವಾದ ,ತಾಂತ್ರಿಕ ಮಾಹಿತಿಯಲ್ಲಿ ರೇಷ್ಮೆ ಇಲಾಖೆಯ ಆರ್.ಎಸ್. ನಾಯಕ್, ತೋಟಗಾರಿಕಾ ಇಲಾಖೆಯ ಮಮತಾ, ಪಶು ವೈದ್ಯಾ„ಕಾರಿ ರಮೇಶ್ ಮಾಹಿತಿ ನೀಡಿದರು. ಕೃಷಿ ಇಲಾಖೆಯ ತಾಂತ್ರಿಕ ಅ„ಕಾರಿ ಪದ್ಮನಾಭ ಶೆಟ್ಟಿ ಸ್ವಾಗತಿಸಿ, ನಿವೃತ್ತ ಸಹಾಯಕ ಕೃಷಿ ಅ„ಕಾರಿ ವಿಠಲ್ ರೈ ಕಾರ್ಯಕ್ರಮ ನಿರೂಪಿಸಿದರು. ಕಡಬ ಹೋಬಳಿ ಕೃಷಿ ಅ„ಕಾರಿ ತಿಮ್ಮಪ್ಪ ಗೌಡ ವಂದಿಸಿದರು.

error: Content is protected !!

Join the Group

Join WhatsApp Group