ನೇಪಾಳದಲ್ಲಿ ನಡುಗಿದ ಭೂಮಿ ➤ 2 ಗಂಟೆಗಳ ಅಂತರದಲ್ಲಿ ಎರಡು ಬಾರಿ ಭೂಕಂಪ

(ನ್ಯೂಸ್ ಕಡಬ) newskadaba.com ನೇಪಾಳ. ಏ.28. ಶುಕ್ರವಾರ ಬೆಳಗಿನ ಜಾವ ಎರಡು ಗಂಟೆಯೊಳಗೆ ನೇಪಾಳದ ಬಾಜುರಾದ ದಹಕೋಟ್‌ ನಲ್ಲಿ ಎರಡು ಭೂಕಂಪಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಮೊದಲ ಭೂಕಂಪವು ರಿಕ್ಟರ್ ಮಾಪಕದಲ್ಲಿ 4.8 ರಷ್ಟಿತ್ತು, ರಾತ್ರಿ 11:58 ಕ್ಕೆ (ಸ್ಥಳೀಯ ಕಾಲಮಾನ) ಸಂಭವಿಸಿದೆ, ನಂತರ ಶುಕ್ರವಾರ ಮುಂಜಾನೆ 1:30 ಕ್ಕೆ 5.9 ರ ತೀವ್ರತೆಯೊಂದಿಗೆ ಮತ್ತೊಂದು ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ಇನ್ನು ನೇಪಾಳದ ಸುರ್ಖೇತ್ ಜಿಲ್ಲೆಯ ಭೂಕಂಪನ ಕೇಂದ್ರದ ಅಧಿಕಾರಿ ರಾಜೇಶ್ ಶರ್ಮಾ ಅವರು ಎರಡು ಭೂಕಂಪಗಳು ಪರಸ್ಪರ ಎರಡು ಗಂಟೆಗಳ ಅಂತರದಲ್ಲಿ ಸಂಭವಿಸಿವೆ ಎಂದು ಹೇಳಿದ್ದಾರೆ.

error: Content is protected !!

Join the Group

Join WhatsApp Group