(ನ್ಯೂಸ್ ಕಡಬ)Newskadaba.com ಹೊಸದಿಲ್ಲಿ,ಏ.28 ಪ್ರಧಾನಿ ನರೇಂದ್ರ ಮೋದಿಅವರು 18 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ 84 ಜಿಲ್ಲೆಗಳಲ್ಲಿ 91 ಎಫ್‌ಎಂ ಟ್ರಾನ್ಸ್‌ಮಿಟರ್‌ಗಳನ್ನು ಉದ್ಘಾಟಿಸಿದರು.”ಇಂದು ಆಲ್ ಇಂಡಿಯಾ ರೇಡಿಯೊದ (ಎಐಆರ್) ಎಫ್‌ಎಂ ಸೇವೆಯ ವಿಸ್ತರಣೆಯು ಆಲ್ ಇಂಡಿಯಾ ಎಫ್‌ಎಂ ಆಗುವತ್ತ ಒಂದು ದೊಡ್ಡ ಮತ್ತು ಪ್ರಮುಖ ಹೆಜ್ಜೆಯಾಗಿದೆ. ಆಲ್ ಇಂಡಿಯಾ ಎಫ್‌ಎಂನ 91 ಎಫ್‌ಎಂ ಟ್ರಾನ್ಸ್‌ಮಿಟರ್‌ಗಳ ಈ ಬಿಡುಗಡೆಯು ದೇಶದ 85 ಜಿಲ್ಲೆಗಳ 2 ಕೋಟಿ ಜನರಿಗೆ ಉಡುಗೊರೆಯಂತಿದೆ”ಎಂದು ಪ್ರಧಾನಿ ಮೋದಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ವಾರ್ತಾ ಹಾಗೂ ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, “ಇದೊಂದು ಐತಿಹಾಸಿಕ ಕ್ರಮವಾಗಿದೆ. ಇದು ಸ್ಥಳೀಯ ಜನರಿಗೆ ಮನರಂಜನೆ, ಕ್ರೀಡೆ ಹಾಗೂ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ರವಾನಿಸಲು ತುಂಬಾ ಸಹಕಾರಿಯಾಗಲಿದೆ. ಮನ್ ಕಿ ಬಾತ್ ಕಾರ್ಯಕ್ರಮವು ರೇಡಿಯೋ ಜನಪ್ರಿಯತೆಯನ್ನು ಹೆಚ್ಚಿಸಿತು” ಎಂದರು.