‘ಭಾರತದ ಜತೆ ಯುದ್ಧ ಮಾಡುವ ಸಾಮರ್ಥ್ಯ ನಮಗಿಲ್ಲ’   ➤ ಪಾಕ್‌ ಮಾಜಿ ಸೇನಾ ಮುಖ್ಯಸ್ಥ

(ನ್ಯೂಸ್ ಕಡಬ)newskadaba.com ಇಸ್ಲಾಮಾಬಾದ್, ಏ.28. ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರು, “ಪಾಕಿಸ್ತಾನದ ಸೈನ್ಯಕ್ಕೆ ಭಾರತದ ವಿರುದ್ಧ ಯುದ್ಧ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ” ಎಂದು ಹೇಳಿದ್ದಾರೆ.

ಈ ಕುರಿತ ವಿಡಿಯೋ ಒಂದು ವೈರಲ್ ಆಗಿದ್ದು, ಭಾರತದ ಜತೆ ಕಾದಾಡುವ ಸ್ಥಿತಿಯಲ್ಲಿ ದೇಶದ ಸೇನೆ ಹಾಗೂ ಟ್ಯಾಂಕ್‌ಗಳಿಲ್ಲ. ಜತೆಗೆ ಆರ್ಥಿಕ ಬಲವೂ ಇಲ್ಲ ಎಂದು 25 ಪತ್ರಕರ್ತರಿದ್ದ ಸುದ್ದಿಗೋಷ್ಠಿಯಲ್ಲಿ ಬಾಜ್ವಾ ತಿಳಿಸಿದ್ದರು ಎಂಬುದಾಗಿ ಈ ವಾರದ ಆರಂಭದಲ್ಲಿ ಇಬ್ಬರು ಪ್ರಮುಖ ಪತ್ರಕರ್ತರಾದಹಮೀದ್ ಮಿರ್ ಮತ್ತು ನಸೀಮ್ ಝೆಹ್ರಾ ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

Also Read  ಜಮಾ ಮಸೀದಿಯ ಸಮೀಕ್ಷಾ ವರದಿ 10 ದಿನಗಳಲ್ಲಿ ಸಲ್ಲಿಕೆ ಮಾಡುವಂತೆ ಕೋರ್ಟ್ ಆದೇಶ- ವಿಚಾರಣೆ ಜನವರಿ 8ಕ್ಕೆ ಮುಂದೂಡಿಕೆ

error: Content is protected !!
Scroll to Top