ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಜೋ ಬಿಡೆನ್ ಮತ್ತೊಮ್ಮೆ ಸ್ಪರ್ಧೆ

(ನ್ಯೂಸ್ ಕಡಬ)newskadaba.com ನ್ಯೂಯಾರ್ಕ್, ಏ.28. ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಏಪ್ರಿಲ್ 25 ರಂದು ಘೋಷಿಸಿದ್ದಾರೆ. ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿದ ಮೂರು ವರ್ಷಗಳ ನಂತರ, ಪ್ರಜಾಪ್ರಭುತ್ವವನ್ನು ಉಳಿಸಲು ಅಮೆರಿಕನ್ನರು ತಮ್ಮನ್ನು ಮತ್ತೆ ಆಯ್ಕೆ ಮಾಡವ ಕರೆಯೊಂದಿಗೆ ಮರುಚುನಾವಣೆಯ ಸ್ಪರ್ಧಿಸುವುದಾಗಿ ಹೇಳಿದರು.

ಔಪಚಾರಿಕವಾಗಿ ಅವರು 2024ರ ಚುನಾವಣೆಯ ಪ್ರಚಾರವನ್ನು ಪ್ರಾರಂಭಿಸದ್ದು, ತಾನು ಈಗಾಗಲೇ ಪ್ರಾರಂಭಿಸಿದ್ದನ್ನು ಮುಗಿಸಲು ಇನ್ನೂ ನಾಲ್ಕು ವರ್ಷಗಳ ಕಾಲಾವಕಾಶ ನೀಡುವಂತೆ ಅಮೆರಿಕನ್ನರಲ್ಲಿ ಕೇಳಿಕೊಂಡಿದ್ದಾರೆ. 2019 ರಲ್ಲಿ ರಾಜಕೀಯಕ್ಕೆ ಮರಳಿದ ನಾಲ್ಕನೇ ವಾರ್ಷಿಕೋತ್ಸವದಂದೇ ಅವರು ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡಾ ಮತ್ತೆ ಸ್ಪರ್ಧಿಸಲಿದ್ದು, ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

Also Read  ಅನುಭವಗಳಿಂದ ಕಲಿಯುವ ಪಾಠವು ನೈಜ ಶಿಕ್ಷಣ ➤ ಶ್ರೀ ಕೃಷ್ಣ ಮೋಹನ್

 

error: Content is protected !!
Scroll to Top