ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್   ➤ ಫೇಕ್ ಕಾಲ್, ಮೆಸೇಜ್ ಗೆ ಮೇ.1ರಿಂದ ನಿರ್ಬಂಧ..!

(ನ್ಯೂಸ್ ಕಡಬ)Newskadaba.com ನವದೆಹಲಿ,ಏ.28 ಟೆಲಿಕಾಂ ನೀತಿಯಲ್ಲಿ ಮೇ 1ರಿಂದ ಮಹತ್ತರ ಬದಲಾವಣೆ ಆಗುತ್ತಿದೆ. ಇಷ್ಟು ದಿನ ಅನಗತ್ಯ ಕಾಲ್, ಮೆಸೇಜುಗಳಿಂದ ಕಿರಿಕಿರಿ ಅನುಭವಿಸುತ್ತಿದ್ದ ಮೊಬೈಲ್ ಬಳಕೆದಾರರಿಗೆ ಇದೀಗ ಟ್ರಾಯ್ ಶುಭ ಸುದ್ದಿಯನ್ನು ನೀಡಿದೆ.

ಈ ರೀತಿ ಫೇಕ್ ಕಾಲ್ ಫೇಕ್ ಮೆಸೇಜ್ ಗಳಿಗೆ ಮೇ 1ರಿಂದ ನಿರ್ಬಂಧವನ್ನು ಹೇರಲಾಗಿದೆ. ಮೊಬೈಲ್ ಬಳಕೆದಾರರು ಪ್ರತಿದಿನ ಲೋನ್, ಬಂಪರ್ ಬಹುಮಾನ ಸೇರಿದಂತೆ ಹಲವು ಅನಗತ್ಯ ಕರೆ ಹಾಗೂ ಮೆಸೇಜ್ ಗಳಿಂದ ಕಿರಿಕಿರಿ ಅನುಭವಿಸುತ್ತಿದ್ದರು. ಆದರೆ ಈಗ ಟ್ರಾಯ್ ಇದಕ್ಕೆಲ್ಲಾ ಕಡಿವಾಣ ಹಾಕಿದೆ.

ಮೊಬೈಲ್ ಗೆ ಬರುವ ಅನಗತ್ಯ ಮೆಸೇಜುಗಳಿಗೆ ಕಡಿವಾಣ ಹಾಕುವಂತೆ ಟೆಲಿಕಾಂ ಆಪರೇಟರ್ ಗಳಿಗೆ ನಿಯಂತ್ರಕ ಸಂಸ್ಥೆ ಟ್ರಾಯ್ ಸೂಚನೆ ನೀಡಿದೆ.ಟೆಲಿಕಾಂ ಕಂಪನಿಗಳು ಅನಗತ್ಯ ಕಾಲ್ ಹಾಗೂ ಸಂದೇಶಗಳನ್ನು ಮೇ 1ರಿಂದ ಫಿಲ್ಟರ್ ಮಾಡಲಿದೆ. ಟೆಲಿಕಾಮ್ ಕಂಪನಿಗಳಿಂದ ನೀಡಲಾಗಿರುವ ಎಲ್ಲ ಹೆಡ್ಡರ್ ಗಳು ಮತ್ತು ಮೆಸೇಜ್ ಟೆಂಪ್ಲೇಟ್ ಗಳನ್ನು ಪರಿಶೀಲನೆ ನಡೆಸಲಿದೆ. ಅದರಿಂದಾಗಿ ಗ್ರಾಹಕರಿಗೆ ಅನಗತ್ಯ ಮೆಸೇಜುಗಳಿಂದ ಉಂಟಾಗುವ ಕಿರಿಕಿರಿಯಿಂದ ಮುಕ್ತಿ ಸಿಗಲಿದೆ.

Also Read  ಬೆಳ್ತಂಗಡಿ: ಹರೀಶ್ ಪೂಂಜಾರ ಜಯದ ಹಾದಿಗೆ ಮುಳ್ಳಾದ ಬಿಲ್ಲಾವರ ಒಗ್ಗಟ್ಟು ?    

 

 

 

 

error: Content is protected !!
Scroll to Top