ಕರ್ನಾಟಕಕ್ಕೆ ಸ್ಥಿರ ಸರ್ಕಾರದ ಆಡಳಿತ ಅಗತ್ಯವಿದೆ➤ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

(ನ್ಯೂಸ್ ಕಡಬ) newskadaba.com. ಬೆಂಗಳೂರು, ಏ.27. ಭಾರತದ ಆರ್ಥಿಕತೆಯ ಭವಿಷ್ಯದ ದೃಷ್ಟಿಯಿಂದ ಕರ್ನಾಟಕ ಪ್ರಮುಖ ರಾಜ್ಯವಾಗಿದ್ದು, ಭಾರತವನ್ನು ಮುನ್ನಡೆಸಲು ನೆರವು ನೀಡುವಲ್ಲಿ ಬೆಂಗಳೂರು ಜ್ಞಾನ ನಗರವಾಗಿದೆ. ಹೀಗಾಗಿ ಇಲ್ಲಿಗೆ ಸ್ಥಿರ ಸರ್ಕಾರದ ಅಗತ್ಯವಿದ್ದು, ಸ್ಥಿರ ಸರ್ಕಾರಕ್ಕಾಗಿ ಬಿಜೆಪಿಗೆ ಮತ ನೀಡಬೇಕೆಂದು ಕಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.

ಬ್ರಿಗೇಡ್ ಗೇಟ್‌ವೇ ಅಪಾರ್ಟ್‌ಮೆಂಟ್‌ನಲ್ಲಿ ಮಲ್ಲೇಶ್ವರಂ ಬಿಜೆಪಿ ಅಭ್ಯರ್ಥಿ ಡಾ.ಅಶ್ವತ್ಥ್ ನಾರಾಯಣ್ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕಕ್ಕೆ ಸ್ಥಿರ ಸರ್ಕಾರದ ಅಗತ್ಯವಿದೆ. ಈ ಸ್ಥಿರ ಸರ್ಕಾರಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದು ಹೇಳಿದರು.

Also Read  ರೈತರಿಗೆ ಗುಡ್ ನ್ಯೂಸ್➤ರಸಗೊಬ್ಬರ ಸಬ್ಸಿಡಿಗೆ 1.08 ಲಕ್ಷ ಕೋಟಿ ರೂ. ಖರ್ಚು ಮಾಡಲು ನಿರ್ಧರಿಸಿದ ಸರ್ಕಾರ

error: Content is protected !!
Scroll to Top