ಮಂಗಳೂರು: ವೈದ್ಯಕೀಯ ಸದಸ್ಯತ್ವ ಕೊಡಿಸುವುದಾಗಿ 5 ಲ.ರೂ. ವಂಚನೆ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.28. ವೈದ್ಯಕೀಯ ವಿಜ್ಞಾನ ಅಕಾಡೆಮಿಯ ಸದಸ್ಯತ್ವ ಕೊಡಿಸುವುದಾಗಿ ಹೇಳಿ 5 ಲ.ರೂ. ಪಡೆದು ಬಳಿಕ ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರುದಾರರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ತಾನು ‘ಪೋಸ್ಟ್ ಗ್ರಾಜುವೇಟ್ ಅಕಾಡಮಿ ಆಫ್ ಮೆಡಿಕಲ್ ಸೈಯನ್ಸ್’ನಿಂದ ಮಾತನಾಡುತ್ತಿದ್ದು, ಫೆಲೋ ಆಫ್ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನಲ್ಲಿ ಸದಸ್ಯತ್ವ ಕೊಡಿಸುವುದಾಗಿ ಹೇಳಿ ಮೊದಲ ಹಂತದಲ್ಲಿ 1.50 ಲ.ರೂ ಪಾವತಿಸುವಂತೆ ಸೂಚಿಸಿದೆ. ಬಳಿಕ ಅಪರಿಚಿತ ವ್ಯಕ್ತಿಯು ಹಂತ ಹಂತವಾಗಿ 5 ಲ.ರೂ. ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Also Read  ಗೋಕರ್ಣದಲ್ಲಿ ಹೊಂಡಕ್ಕೆ ಬಿದ್ದ ಕಾರು ➤ ಓರ್ವ ಮೃತ್ಯು..!!

 

error: Content is protected !!
Scroll to Top