ಉಪ್ಪಿನಂಗಡಿ: ನೇತ್ರಾವತಿ ನದಿ ಕಿನಾರೆಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.13. ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಸ್ಥಾನದ ಬಳಿಯ ನೇತ್ರಾವತಿ ನದಿ ಕಿನಾರೆಯಲ್ಲಿ ಅಪರಿಚಿತ ವ್ಯಕ್ತಿಯೋರ್ವರು ಮಲಗಿದ್ದಲ್ಲಿಯೇ ಮೃತಪಟ್ಟ ಸ್ಥಿತಿಯಲ್ಲಿ ಶುಕ್ರವಾರದಂದು ಕಂಡುಬಂದಿದೆ.

ಸುಮಾರು 38ರಿಂದ 40ರ ಹರೆಯದ ವಿಕಲಾಂಗ ವ್ಯಕ್ತಿಯೋರ್ವರು ಇಲ್ಲಿನ ನದಿ ಕಿನಾರೆಯಲ್ಲಿ ಮಲಗಿದ್ದು, ನಿದ್ರಿಸಿದಾಗಲೇ ಇವರು ಮೃತಪಟ್ಟಿದ್ದಾರೆ. ಶುಕ್ರವಾರದಂದು ಈ ಘಟನೆ ಬೆಳಕಿಗೆ ಬಂದಿದ್ದು, ಇವರು ನಸು ನೀಲಿ ಬಣ್ಣದ ಉದ್ದ ಕೈ ತೋಳಿನ ಶರ್ಟ್ ಹಾಗೂ ನೀಲಿ ಚೌಕುಳಿ ಇರುವ ಪಂಚೆಯನ್ನು ಧರಿಸಿದ್ದರು. ಕಾಯಿಲೆ ಅಥವಾ ಇನ್ಯಾವುದೋ ಕಾರಣದಿಂದ ಇವರು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಅಸಾಫ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  15 ದಿನಗಳಲ್ಲಿ ಮರಳು ಪರವಾನಗಿ ಹಾಗೂ ಅಕ್ರಮ ಗಣಿಗಾರಿಕೆ ಪತ್ತೆಗೆ 196 ಸಿಸಿ ಟಿವಿ ಅಳವಡಿಕೆ ➤ ಸಚಿವ ಸಿ.ಸಿ ಪಾಟೀಲ್

error: Content is protected !!
Scroll to Top