ಪರೀಕ್ಷೆಯಲ್ಲಿ ಫೇಲ್ ಆದ ಕಾರಣ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.! ➤ ಸುದ್ದಿ ತಿಳಿದು ವಿಷ ಸೇವಿಸಿದ ಆಕೆಯ ಗೆಳತಿ.!

(ನ್ಯೂಸ್ ಕಡಬ)Newskadaba.com ಚಿಕ್ಕಮಗಳೂರು,ಏ.27 ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸುದ್ದಿ ತಿಳಿದು ಫೇಲ್ ಆಗಿದ್ದ ಆಕೆಯ ಗೆಳತಿ ಕೂಡ ವಿಷ ಸೇವಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಕಳಸ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಎಸ್.ಕೆ.ಮೇಗಲ್ ಗ್ರಾಮದ ಸ್ಪರ್ಶ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಷಯ ತಿಳಿದ ಆಕೆಯ ಗೆಳತಿ ಜಾಂಬಳೆ ಗ್ರಾಮದ ದೀಕ್ಷಿತಾ ಕೂಡ ವಿಷ ಸೇವಿಸಿದ್ದಾಳೆ.

ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಸ್ಪರ್ಶ ಜೀವಶಾಸ್ತ್ರ ವಿಷಯದಲ್ಲಿ ಅನುತ್ತೀರ್ಣಳಾಗಿದ್ದಳು ಎನ್ನಲಾಗಿದ್ದು, ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ದೀಕ್ಷಿತಾ ಎರಡು ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದಳು. ಸ್ಪರ್ಶ ಸಾವಿನ ಸುದ್ದಿ ತಿಳಿದು ದೀಕ್ಷಿತಾ ವಿಷ ಸೇವಿಸಿದ್ದು, ಕಳಸ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

Also Read  ಸಿದ್ಧರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಸ್ವಪಕ್ಷೀಯರಿಂದ ಮುಂದುವರಿದ ಕೂಗು ➤ ಸಿಎಂ ಕುಮಾರಸ್ವಾಮಿ ಗರಂ

 

 

 

error: Content is protected !!
Scroll to Top