ಪ್ರಧಾನಿ ಮೋದಿ ರೋಡ್ ಶೋ..!    ➤ ದೂರು ನೀಡಿದ ವ್ಯಕ್ತಿ

(ನ್ಯೂಸ್ ಕಡಬ)newskadaba.com  ಕೇರಳ, ಏ.27. ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋಗೆ ಸಂಬಂಧಿಸಿದಂತೆ ಕೇರಳ ಡಿಜಿಪಿ ಹಾಗೂ ಕೇರಳ ಮೋಟಾರು ವಾಹನ ಇಲಾಖೆಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಸಂಚಾರ ನಿಯಮಗಳ ಉಲ್ಲಂಘನೆ ಆರೋಪದಡಿ ಪ್ರಧಾನಿ ವಿರುದ್ಧ ದೂರು ಕೊಡಲಾಗಿದೆ.

ಏಪ್ರಿಲ್​ 24 ಮತ್ತು 25ರಂದು ಎರಡು ದಿನಗಳ ಕೇರಳ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ರೋಡ್​ ಶೋ ನಡೆಸಿದ್ದರು. ಈ ಬಗ್ಗೆ ಏಪ್ರಿಲ್​ 26ರಂದು ತ್ರಿಶೂರ್‌ ಮೂಲದ ಜಯಕೃಷ್ಣನ್‌ ಎಂಬುವರು ರಾಜ್ಯ ಪೊಲೀಸ್‌ ಮುಖ್ಯಸ್ಥ ಅನಿಲ್‌ಕಾಂತ್‌ ಹಾಗೂ ಮೋಟಾರು ವಾಹನ ಇಲಾಖೆಗೆ ದೂರು ಸಲ್ಲಿಸಿದ್ದಾರೆ.

Also Read  ದ್ವಿಚಕ್ರ ವಾಹನಗಳ ನಡುವೆ ಅಪಘಾತ: ಸೊಸೈಟಿ ಉದ್ಯೋಗಿ ಮೃತ್ಯು..!

 

error: Content is protected !!
Scroll to Top