ಮುಂಬೈನ ಮಹಿಳಾ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ನಿಗೂಢವಾಗಿ ಮೃತ್ಯು

(ನ್ಯೂಸ್ ಕಡಬ)newskadaba.com  ಮುಂಬೈ, ಏ.27. ಮುಂಬೈನ ಕುರ್ಲಾ ಉಪನಗರದಲ್ಲಿ ಮಹಿಳಾ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಒಬ್ಬರು ತಮ್ಮ ನಿವಾಸದಲ್ಲಿ ನಿಗೂಢವಾಗಿ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಶೀತಲ್ ಯೆಡ್ಕೆ (30) ಎಂದು ಗುರುತಿಸಲಾಗಿದೆ. ಶೀತಲ್ ಯೆಡ್ಕೆ ಅವರು ಕುರ್ಲಾ (ಪೂರ್ವ)ದ ನೆಹರು ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ ಹಲವು ತಿಂಗಳಿನಿಂದ ಕೆಲಸಕ್ಕೆ ಗೈರು ಹಾಜರಾಗಿದ್ದಕ್ಕಾಗಿ ಇತ್ತೀಚೆಗೆ ಶಿಸ್ತು ಕ್ರಮದ ನೋಟಿಸ್ ನೀಡಲಾಗಿತ್ತು .

ಇನ್ನು ಕಳೆದೆರಡು ದಿನಗಳಿಂದ ಆಕೆಯ ಫ್ಲಾಟ್ ನಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಬಾಗಿಲು ಒಡೆದು ನೋಡಿದಾಗ ಯೆಡ್ಕೆ ಶವವಾಗಿ ಬಿದ್ದಿರುವುದನ್ನು ಕಂಡು ಬಂದಿದೆ.

Also Read  ಪ್ರೇಯಸಿ ಮೃತಪಟ್ಟ ಹಿನ್ನೆಲೆ ➤ ಆಕೆಯ ಸಮಾಧಿಯ ಬಳಿಯೇ ಆತ್ಮಹತ್ಯೆ ಮಾಡಿಕೊಂಡ ಪ್ರಿಯತಮ...!

 

 

error: Content is protected !!
Scroll to Top