ಯುವತಿಯೊಬ್ಬಳು ಪ್ರಿಯಕರನ ತಂದೆಯೊಂದಿಗೆ ಎಸ್ಕೇಪ್‌..!

(ನ್ಯೂಸ್ ಕಡಬ)Newskadaba.com ತ್ತರ ಪ್ರದೇಶ,ಏ.27 ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಲಕ್ಷಣ ಪ್ರೇಮ ಪ್ರಕರಣವೊಂದು ನಡೆದಿದೆ. 20 ವರ್ಷದ ಯುವತಿಯೊಬ್ಬಳು ತನ್ನ ಪ್ರಿಯಕರನ ತಂದೆಯೊಂದಿಗೆ ಓಡಿಹೋಗಿದ್ದಾಳೆ.ಒಂದು ವರ್ಷದ ಹಿಂದೆ ಯುವತಿ ತನ್ನ ಪ್ರಿಯಕರನ ಮನೆಗೆ ಭೇಟಿ ನೀಡಿದ್ದಳು.ಆಗ ಯುವತಿಗೆ ಗೆಳೆಯನ ತಂದೆ ಕಮಲೇಶ್ ಅವರ ಪರಿಚಯವಾಗಿತ್ತು. ಅಂದಿನಿಂದ ಅವರು ಪರಸ್ಪರ ಮಾತನಾಡುವುದನ್ನು ಮುಂದುವರೆಸಿದ್ದರು.

ಕಮಲೇಶ್ ಮತ್ತು ಯುವತಿ ಮಾರ್ಚ್ 2022 ರಲ್ಲಿ ಕಮಲೇಶ್ ಅವರ 20 ವರ್ಷದ ಮಗ ಅಮಿತ್ ನನ್ನು ಬಿಟ್ಟು ಕಾನ್ಪುರದಿಂದ ಓಡಿಹೋದರು. ಈ ಬಗ್ಗೆ ಯುವತಿಯ ಮನೆಯವರು ಚಕೇರಿ ಪೊಲೀಸ್ ಠಾಣೆಗೆ ಅಪಹರಣದ ದೂರು ನೀಡಿದ್ದರು.ಒಂದು ವರ್ಷದ ಬೇಟೆಯ ನಂತರ ಪೊಲೀಸರು ಕಮಲೇಶ್ ಮತ್ತು ಯುವತಿಯನ್ನು ದೆಹಲಿಯಲ್ಲಿ ಪತ್ತೆಹಚ್ಚಿ ವಶಪಡಿಸಿಕೊಂಡರು.

Also Read  ಮರ್ಧಾಳ: ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಬಗ್ಗೆ ಮೋದಿ ಆ್ಯಪ್‍ನಲ್ಲಿ ದೂರು ► ಯುವಕನ ದೂರಿಗೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ

 

error: Content is protected !!
Scroll to Top