(ನ್ಯೂಸ್ ಕಡಬ)Newskadaba.com ಬೆಂಗಳೂರು ,ಏ.27 ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮೇ. 10 ರಂದು ನಡೆಯಲಿದ್ದು, ಮತದಾನಕ್ಕಾಗಿ ಊರಿಗೆ ಹೋಗಲು ಈಗಾಗಲೇ ಕೆಎಸ್ ಆರ್ ಟಿಸಿ ಮತ್ತು ಖಾಸಗಿ ಬಸ್ ಗಳಲ್ಲಿ ಬುಕಿಂಗ್ ಗಮನಾರ್ಹ ಏರಿಕೆ ಕಾಣುತ್ತಿದೆ.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಲಭ್ಯವಾದ ಮಾಹಿತಿಯ ಪ್ರಕಾರ, ಚುನಾವಣೆಗೆ ಒಂದು ದಿನ ಮುಂಚಿತವಾಗಿ ಮೇ 9 ರಂದು ಬುಕಿಂಗ್ನಲ್ಲಿ ಸುಮಾರು 40% ಹೆಚ್ಚಳವಾಗಿದೆ.
ಖಾಸಗಿ ಬಸ್ ಗಳ ಬುಕ್ಕಿಂಗ್ ನಲ್ಲೂ ಸಹ ಏರಿಕೆಯಾಗಿದ್ದು, ಇದರ ಪರಿಣಾಮವಾಗಿ, ದರಗಳು ತೀವ್ರವಾಗಿ ಏರಿಕೆಯಾಗಿವೆ. ಕೆಲವು ಖಾಸಗಿ ನಿರ್ವಾಹಕರು ದರವನ್ನು 50% ರಷ್ಟು ಹೆಚ್ಚಿಸಿದ್ದಾರೆ. ಬುಕಿಂಗ್ನಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ ಮತ್ತು ಅನೇಕ ಬಸ್ಸುಗಳು ಶೀಘ್ರದಲ್ಲೇ ಭರ್ತಿಯಾಗುತ್ತಿವೆ.