(ನ್ಯೂಸ್ ಕಡಬ)newskadaba.com ಮಂಗಳೂರು, ಏ.27. ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನೆಲೆ ಇದೇ ಏ.29 ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಗಳೂರು ನಗರದಲ್ಲಿ ರೋಡ್ ಷೋ ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಏ.29 ರಂದು ಸಂಜೆ 4 ಗಂಟೆಗೆ ಪುರಭವನದ ಕ್ಲಾಕ್ ಟವರ್‌ನಿಂದ ಪ್ರಾರಂಭವಾಗಿ ಹಂಪನಕಟ್ಟೆ ವೃತ್ತದ ಮೂಲಕ ಕೆ.ಎಸ್ ರಾವ್ ರಸ್ತೆಯಲ್ಲಿ ಸಾಗಿ ಮಂಜೇಶ್ವರ ಗೋವಿಂದ ಪೈ ವೃತ್ತದ ವರೆಗೆ ಬೃಹತ್ ರೋಡ್ ಷೋ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.