ಮಂಗಳೂರು: ಗ್ಯಾಂಗ್ ವಾರ್ ಗೆ ರೌಡಿಶೀಟರ್ ಬಲಿ ► ಟಾರ್ಗೆಟ್ ಗ್ಯಾಂಗ್ ಲೀಡರ್ ಇಲ್ಯಾಸ್ ಹತ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.13. ದೇರಳಕಟ್ಟೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಅಪಹರಣಗೈದು ಅವರ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿ ಬ್ಲಾಕ್ ಮೇಲ್ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿ ಟಾರ್ಗೆಟ್ ಗ್ಯಾಂಗ್ ನ ನಾಯಕ ಇಲ್ಯಾಸ್ ನನ್ನು ದುಷ್ಕರ್ಮಿಗಳ ತಂಡವೊಂದು ಕೊಚ್ಚಿ ಕೊಲಗೈದ ಘಟನೆ ಶನಿವಾರ ಮುಂಜಾನೆ ಮಂಗಳೂರಿನಲ್ಲಿ ನಡೆದಿದೆ.

ಇತ್ತೀಚೆಗೆ ಫರಂಗಿಪೇಟೆಯಲ್ಲಿ ನಡೆದ ಮೂವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿ ಎರಡು ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಇಲ್ಯಾಸ್ ಮಂಗಳೂರಿನ ಜಪ್ಪುವಿನಲ್ಲಿರುವ ಫ್ಲ್ಯಾಟ್ ನಲ್ಲಿದ್ದ ಸಂದರ್ಭದಲ್ಲಿ ತಂಡವೊಂದು ಬಾಗಿಲು ಬಡಿದಿದೆ. ಇಲ್ಯಾಸ್ ಪತ್ನಿ ಬಾಗಿಲು ತೆಗೆದ ಸಂದರ್ಭ ಮನೆಯೊಳಗೆ ನುಗ್ಗಿದ ತಂಡ ಮಲಗಿದ್ದ ಇಲ್ಯಾಸ್ ಮೇಲೆ ದಾಳಿ ಮಾಡಿದ್ದು, ಪತ್ನಿಯ ಎದುರೇ‌ ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿದೆ. ಇಲ್ಯಾಸ್ ಒರ್ವ ಕುಖ್ಯಾತ ರೌಡಿಯಾಗಿದ್ದು, ಕೊಲೆ, ಸುಲಿಗೆ, ಅಪಹರಣ, ಅತ್ಯಾಚಾರ ಸೇರಿದಂತೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ. ಸಚಿವ ಯು.ಟಿ.ಖಾದರ್ ಜೊತೆ ಗುರುತಿಸಿಕೊಂಡಿದ್ದ ಇಲ್ಯಾಸ್ ಯುವ ಕಾಂಗ್ರೇಸ್ ನ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದ.

Also Read  ಸುಳ್ಯ: ಕ್ಯಾಶ್ಯೂ ಫ್ಯಾಕ್ಟರಿಯ ಹಳೆ ಕಟ್ಟಡ ಕುಸಿತ ➤ ಗುಜರಿ ವ್ಯಾಪಾರಿ ಮೃತ್ಯು

error: Content is protected !!
Scroll to Top