ಶಸ್ತ್ರಚಿಕಿತ್ಸಾ ವಿಧಾನಗಳ ವಿಷಯದಲ್ಲಿ ಆಯುರ್ವೇದ ವೈದ್ಯರು ಎಂಬಿಬಿಎಸ್ ವೈದ್ಯರಿಗೆ ಸಮಾನರಲ್ಲ..!   ➤ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು  

(ನ್ಯೂಸ್ ಕಡಬ)Newskadaba.comವದೆಹಲಿ,ಏ.27 ಶಸ್ತ್ರಚಿಕಿತ್ಸಾ ವಿಧಾನಗಳ ವಿಷಯದಲ್ಲಿ ಆಯುರ್ವೇದ ವೈದ್ಯರು ಎಂಬಿಬಿಎಸ್ ವೈದ್ಯರಿಗೆ ಸಮಾನರಲ್ಲ. ಆದ್ದರಿಂದ ಸಮಾನ ವೇತನಕ್ಕೆ ಅರ್ಹರಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.ಈ ಮೂಲಕ ಎರಡೂ ವರ್ಗಗಳಿಗೆ ವೇತನ ಮತ್ತು ಪ್ರಯೋಜನಗಳನ್ನು ಸಮೀಕರಿಸಿದ ಗುಜರಾತ್ ಹೈಕೋರ್ಟ್ ಆದೇಶವನ್ನು ತಳ್ಳಿ ಹಾಕಿದೆ.

ವಿ.ರಾಮಸುಬ್ರಮಣಿಯನ್ ಮತ್ತು ಪಂಕಜ್ ಮಿಥಾಲ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಅಲೋಪತಿ ವೈದ್ಯರು ತುರ್ತು ಕರ್ತವ್ಯಗಳನ್ನು ನಿರ್ವಹಿಸಬೇಕು. ಟ್ರಾಮಾ ಕೇರ್ ಅನ್ನು ಒದಗಿಸಬೇಕು. ಇದು ಆಯುರ್ವೇದ ವೈದ್ಯರ ವಿಷಯದಲ್ಲಿ ಅಲ್ಲ ಎಂದು ಹೇಳಿದೆ.

Also Read  ತಿರುಮಲ ಬೆಟ್ಟದಲ್ಲಿ ಚಿರತೆ ದಾಳಿ..! - ಬಾಲಕಿ ಮೃತ್ಯು

 

 

error: Content is protected !!
Scroll to Top