ಮತದಾನದ ಅವಧಿ ವಿಸ್ತರಿಸಿದ ಚುನಾವಣಾ ಆಯೋಗ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.27. ರಾಜ್ಯದಲ್ಲಿ ಚುನಾವಣೆಗೆ ಅಂತಿಮ ಹಂತದ ತಯಾರಿ ನಡೆಸುತ್ತಿರುವ ಆಯೋಗವು ಇದೀಗ ಮತದಾರರಿಗೆ ಅನುಕೂಲವಾಗುವಂತೆ ಮತದಾನದ ಸಮಯವನ್ನು ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ.


ಪ್ರತಿ ಚುನಾವಣೆಗೆ ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನವಿರುತ್ತದೆ. ಆದರೆ ಈ ಬಾರಿ ಅಧಿಕ ಬಿಸಿಲಿನ ವಾತಾವರಣ ಇರುವುದರಿಂದ ಮತದಾರರಿಗೆ ಅನುಕೂಲವಾಗುವಂತೆ ಒಂದೂವರೆ ತಾಸು ಸಮಯ ಹೆಚ್ಚಳ ಮಾಡಿದೆ. ಆ ಪ್ರಕಾರ ಬೆಳಗ್ಗೆ 7ರಿಂದ ಸಂಜೆ 6.30ರವರೆಗೆ ಮತದಾನ ಅವಧಿಯಾಗಿರುತ್ತದೆ. ಒಂದೇ ಹಂತದಲ್ಲಿ ಮೇ.10ರಂದು ಮತದಾನ ನಡೆಯಲಿದೆ ಎಂದು ವರದಿ ತಿಳಿಸಿದೆ.

Also Read  ಹೂಡಿಕೆಯ ಹೊರತಾಗಿಯೂ ರಾಜ್ಯದಲ್ಲಿ ಕುಸಿಯುತ್ತಿರುವ ಪ್ರವಾಸೋದ್ಯಮ!

error: Content is protected !!
Scroll to Top