ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್-ಬಿಜೆಪಿ ನಾಯಕರು ಮುಖಾಮುಖಿ..! *

(ನ್ಯೂಸ್ ಕಡಬ)Newskadaba.com ಬೆಳಗಾವಿ,ಏ.26 ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್-ಬಿಜೆಪಿ ನಾಯಕರು ಮುಖಾಮುಖಿಯಾದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದೇ ಕಡೆ ಸೇರಿದರು.ಪರಸ್ಪರರು ಹಸ್ತಲಾಘವ ಮಾಡಿ ಮಾತುಕತೆ ನಡೆಸಿದರು.

ಬೆಂಗಳೂರಿನಿಂದ ಬಂದಿಳಿದ ಮಲ್ಲಿಕಾರ್ಜುನ ಖರ್ಗೆ ಚಿಕ್ಕೋಡಿಯತ್ತ, ಬಸವರಾಜ ಬೊಮ್ಮಾಯಿ ಹುಕ್ಕೇರಿ ತಾಲ್ಲೂಕಿನ ಯಮಕನಮರಡಿಯತ್ತ ತೆರಳಿದರು. ಮಾಜಿ ಸಚಿವ ಡಿ.ಬಿ.ಇನಾಮದಾರ ಅವರಿಗೆ ಅಂತಿಮ ನಮನ ಸಲ್ಲಿಸಿ‌ ನೇಗಿನಹಾಳದಿಂದ ಆಗಮಿಸಿದ ಸಿದ್ದರಾಮಯ್ಯ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

Also Read  ಬೆಳ್ತಂಗಡಿ: ನದಿ ನೀರಿಗೆ ವಿಷಪ್ರಾಷನ      ➤ನೀರು ಸರಬರಾಜು ಸ್ಥಗಿತ, ಮೀನುಗಳ ಮಾರಣಹೋಮ

 

 

 

error: Content is protected !!
Scroll to Top