ಆಸ್ತಿ ವಿವರ ಸಲ್ಲಿಸದ 33 ರಾಜಕಾರಣಿಗಳ ಪಟ್ಟಿ ಬಿಡುಗಡೆ ಮಾಡಿದ ಲೋಕಾಯುಕ್ತ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.26. ಕರ್ನಾಟಕ ಲೋಕಾಯುಕ್ತ ಕಾಯ್ದೆ ಪ್ರಕಾರ ಪ್ರತಿವರ್ಷ ಶಾಸಕರು ಹಾಗೂ ಅವರ ಕುಟುಂಬ ಸದಸ್ಯರ ಆಸ್ತಿ ವಿವರಗಳನ್ನು ಸಲ್ಲಿಕೆ ಮಾಡಬೇಕು. ಆದರೆ, 2021-22ನೇ ಸಾಲಿಗೆ ಸಚಿವರು ಸೇರಿದಂತೆ ಹಲವು ಶಾಸಕರು ಆಸ್ತಿ ವಿವರಗಳನ್ನು ಸಲ್ಲಿಕೆ ಮಾಡದೆ ಕಾನೂನಿನ ಸಂಕಷ್ಟಕ್ಕೆ ಸಿಲುಕಿದ್ದಾರೆ.


ಇದೀಗ ಆಸ್ತಿ ವಿವರ ನೀಡದ 15 ಮಂದಿ ಶಾಸಕರು ಮತ್ತು 18 ಮಂದಿ ವಿಧಾನ ಪರಿಷತ್‌ ಸದಸ್ಯರ ಹೆಸರುಗಳನ್ನು ಬಹಿರಂಗಪಡಿಸಲಾಗಿದೆ. ಸಚಿವ ಶ್ರೀರಾಮುಲು, ಮಾಜಿ ಸಚಿವರಾದ ಜಮೀರ್‌ ಅಹ್ಮದ್‌, ಎನ್‌. ಮಹೇಶ್‌ ಆಯನೂರು ಮಂಜುನಾಥ್, ಎಂ.ಪಿ ಕುಮಾರಸ್ವಾಮಿ ಮುಂತಾದವರ ಹೆಸರು ಈ ಪಟ್ಟಿಯಲ್ಲಿದೆ.

Also Read  3 ತಿಂಗಳ ಸಂಬಳ ಸಿಗದೆ ಹೋರಾಟಕ್ಕೆ ಮುಂದಾದ 108 ಅಂಬುಲೆನ್ಸ್‌ ಸಿಬ್ಬಂದಿ

error: Content is protected !!
Scroll to Top