ಕರಾವಳಿ ಮೂಲದ ಮುಂಬಯಿ ಹೋಟೆಲ್‌ ಉದ್ಯಮಿಯ ಅಪಹರಣ

(ನ್ಯೂಸ್ ಕಡಬ)newskadaba.com  ಮುಂಬಯಿ, ಏ.26. ಮುಂಬಯಿಯ ಹೋಟೆಲ್‌ ಉದ್ಯಮಿಯೊಬ್ಬರು ಅಪಹರಣಕ್ಕೊಳಗಾದ ಘಟನೆ ಸೋಮವಾರ ಸಂಭವಿಸಿದೆ. ಅಪಹರಣಕ್ಕೊಳಗಾದ ಹೋಟೆಲ್‌ ಉದ್ಯಮಿ ಕರಾವಳಿ ಅನೂಪ್‌ ಶೆಟ್ಟಿ ಎನ್ನಲಾಗಿದೆ.

ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಅನೂಪ್‌ ಶೆಟ್ಟಿಯವರನ್ನು ಪಾರು ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಹಣಕಾಸಿನ ವ್ಯವಹಾರದ ತಗಾದೆಯ ಹಿನ್ನೆಲೆಯಲ್ಲಿ ಈ ಅಪಹರಣವಾಗಿದೆ. ಕೆಲ ಸಮಯ ಹೋಟೆಲ್‌ ವ್ಯವಹಾರದಲ್ಲಿ ಪಾಲುದಾರನಾಗಿದ್ದ ವ್ಯಕ್ತಿಯೇ ಹಣಕಾಸಿನ ವಿಚಾರದಲ್ಲಿ ತಗಾದೆ ಬಂದು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

Also Read  ಎರಡು ಗುಂಪುಗಳ‌ ನಡುವೆ ಹೊಡೆದಾಟ- ಪುರಸಭಾ ಸದಸ್ಯನಿಗೆ ಗಾಯ; ಲಘು ಲಾಠಿ ಪ್ರಹಾರ

 

error: Content is protected !!
Scroll to Top