ಪ್ರಚಾರದ ಮೂಲಕ ಮತಸೆಳೆಯಲು ಪಕ್ಷಗಳ ಕಸರತ್ತು..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.26. ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲೂ ಚುನಾವಣೆ ಪ್ರಚಾರ ಬಿರುಸುಗೊಂಡಿದೆ. ರಾಜಧಾನಿಯ ಅಖಾಡಕ್ಕೆ ನಾಯಕರು ಧುಮುಕಿದ್ದಾರೆ. ಅಭ್ಯರ್ಥಿಗಳಿಗೆ ಹೊಸ ಹುರುಪು ಬಂದಿದ್ದು ರೋಡ್‌ ಶೋ, ಬೈಕ್‌ ರ್‍ಯಾಲಿ, ಮನೆ ಮನೆ ಪ್ರಚಾರದ ಮೂಲಕ ಮತಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ.

ಚಿಕ್ಕಪೇಟೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಬೈಕ್‌ ಜಾಥಾ ನಡೆಯಿತು. ಸಾವಿರಕ್ಕೂ ಹೆಚ್ಚು ಬೈಕ್‌ಗಳಲ್ಲಿ ಬೆಂಬಲಿಗರು ಭಾಗವಹಿಸಿದ್ದರು. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರೀತುರಾಜ್ ಸಿನ್ಹಾ, ಅಭ್ಯರ್ಥಿ ಉದಯ್ ಬಿ. ಗರುಡಾಚಾರ್ ಚಾಲನೆ ನೀಡಿದರು.

Also Read  ಕತ್ತು ಕೊಯ್ದು ಪತ್ನಿಯನ್ನ ಕೊಲೆಗೈದ ಪಾಪಿ ಪತಿ.!

 

 

 

error: Content is protected !!
Scroll to Top