ಬಾವಿ ಕೊರೆಯಲು ಸ್ಪೋಟಕ ಬಳಕೆ    ➤ ಪಕ್ಕದ ಮನೆಯ ಗರ್ಭಿಣಿಗೆ ಆಘಾತ

(ನ್ಯೂಸ್ ಕಡಬ)newskadaba.com ಕೊಣಾಜೆ, ಏ.26. ಬಾವಿ ಕೊರೆಯಲು ಬಳಸಿದ ಸ್ಫೋಟಕದಿಂದ ಗರ್ಭಿಣಿ ಮಹಿಳೆ ಆಘಾತಕ್ಕೊಳಗಾಗಿದ್ದು, ಈ ಬಗ್ಗೆ ದೂರು ದಾಖಲಾಗಿರುವ ಬಗ್ಗೆ ವರದಿಯಾಗಿದೆ.

ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಕಬೈಲು ಎಂಬಲ್ಲಿ ಘಟನೆ ಸಂಭವಿಸಿದೆ. ಬಡಕಬೈಲು ನಿವಾಸಿ ಹರೀಶ್ ಎಂಬವರ ಪತ್ನಿ ಸಾವಿತ್ರಿ ಶಬ್ದದಿಂದ ಆಘಾತಕ್ಕೆ ಒಳಗಾದವರು ಎನ್ನಲಾಗಿದೆ.

ಇವರ ಮನೆಯ 100ಮೀ ಅಂತರದಲ್ಲಿ ಫಾರುಕ್ ಎಂಬವರು ಕಳೆದ ಎರಡು ವಾರದಿಂದ ಬಾವಿ ತೋಡುವ ಕೆಲಸ ಮಾಡುತ್ತಿದ್ದರು.ಬಾವಿ ತೋಡುವ ಮಧ್ಯೆ ಸಿಗುವ ಬಂಡೆಕಲ್ಲುಗಳನ್ನು ಒಡೆಯಲು ಸ್ಫೋಟಕ ಬಳಸಿದ್ದಾರೆ.

Also Read  ರಾಜ್ಯಸರಕಾರದ ಹಿಂದೂ ವಿರೋಧಿ ದೋರಣೆಯನ್ನು ಖಂಡಿಸಿ ► ತಾಲೂಕಿನಾದ್ಯಂತ ಪ್ರತಿಭಟನೆ

 

error: Content is protected !!
Scroll to Top