ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ವಾಹನಗಳ ಸಂಚಾರ ನಿಷೇಧ.!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.26ಬೆಂಗಳೂರು -ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಬೈಕ್, ಆಟೋ ರಿಕ್ಷಾ ಮತ್ತು ಇತರ ನಿಧಾನಗತಿಯ ವಾಹನಗಳನ್ನು ನಿಷೇಧಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಶೀಘ್ರದಲ್ಲೇ ಆದೇಶ ಹೊರಡಿಸುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಆಡಳಿತಾತ್ಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಅಧಿಸೂಚನೆಯನ್ನು ಸರ್ಕಾರಿ ಗೆಜೆಟ್ ನಲ್ಲಿ ಪ್ರಕಟಿಸಿದ ಕೂಡಲೇ ನಿಷೇಧವನ್ನು ಜಾರಿಗೆ ತರಲಾಗುವುದು ಎನ್ನಲಾಗಿದೆ.

ಎನ್‌ಎಚ್‌ಎಐ ಅಧಿಕಾರಿಗಳ ಪ್ರಕಾರ, ದ್ವಿಚಕ್ರ ವಾಹನಗಳು ಮತ್ತು ಇತರ ನಿಧಾನವಾಗಿ ಚಲಿಸುವ ವಾಹನಗಳು ಹೈಸ್ಪೀಡ್ ಕಾರಿಡಾರ್ನಲ್ಲಿ ಸುರಕ್ಷತಾ ಬೆದರಿಕೆಯನ್ನುಂಟುಮಾಡುತ್ತವೆ. ಅಂತಹ ವಾಹನಗಳು ಎಕ್ಸ್ ಪ್ರೆಸ್ ವೇಯ ಎರಡೂ ಬದಿಗಳಲ್ಲಿ ಸೇವಾ ರಸ್ತೆಗಳನ್ನು ಬಳಸಬಹುದು ಅಂತ ತಿಳಿಸಿದ್ದಾರೆ. ಬೈಕುಗಳು, ಆಟೋಗಳು ಮತ್ತು ಕೃಷಿ ಟ್ರಾಕ್ಟರುಗಳಂತಹ ಇತರ ನಿಧಾನವಾಗಿ ಚಲಿಸುವ ವಾಹನಗಳನ್ನು ಸಾಮಾನ್ಯವಾಗಿ ಪ್ರವೇಶ-ನಿಯಂತ್ರಿತ ಹೆದ್ದಾರಿಗಳಲ್ಲಿ ಅನುಮತಿಸಲಾಗುವುದಿಲ್ಲ.

Also Read  "ಬಾಲಕಾರ್ಮಿಕತೆ ನಿಲ್ಲಿಸಿ- ಶಿಕ್ಷಣ ಒದಗಿಸಿ" ➤ ಕ್ಯಾಂಪಸ್ ಫ್ರಂಟ್ ವತಿಯಿಂದ ವಿವಿಧ ಸರಕಾರಿ ಅಧಿಕಾರಿಗಳಿಗೆ ಮನವಿ

 

 

 

error: Content is protected !!
Scroll to Top