ಚುನಾವಣಾ ಪ್ರಚಾರಕ್ಕೆ 10 ಸಾವಿರಕ್ಕೂ ಹೆಚ್ಚು ಸರ್ಕಾರಿ ಬಸ್ಸುಗಳ ಬಳಕೆ!

(ನ್ಯೂಸ್ ಕಡಬ) newskadaba.com. ಬೆಂಗಳೂರು,ಏ.26. ಬೆಂಗಳೂರಿನಲ್ಲಿ ಚುನಾವಣೆಯ ರಂಗು ಹೆಚ್ಚಾಗಿದೆ. ಚುನಾವಣೆಗೆ ಬೇಕಾದ ಬಸ್‍ಗಳ ವ್ಯವಸ್ಥೆಗೂ ಈಗಾಗಲೇ ಬುಕಿಂಗ್ ಮಾಡಲಾಗಿದೆ. ಹೀಗಾಗಿ ಚುನಾವಣೆ ವೇಳೆ ಬಸ್ ಕೊರತೆ ಉಂಟಾಗುವ ಸಾಧ್ಯತೆ ಇದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಕೌಂಟ್‍ಡೌನ್ ಶುರುವಾದ ಬೆನ್ನಲ್ಲೇ ಚುನಾವಣಾ ಪ್ರಚಾರಕ್ಕೆ ರಾಜ್ಯದಾದ್ಯಂತ 10 ಸಾವಿರದಷ್ಟು ಸರ್ಕಾರಿ ಬಸ್ಸುಗಳ ಬಳಕೆ ಮಾಡಲಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಚುನಾವಣೆಯ ಪೀಕ್ ಸೀಸನ್ ಶುರುವಾಗಿದೆ. ಎಲ್ಲಾ ಪಕ್ಷಗಳು ಮತದಾರರನ್ನು ಸೆಳೆಯಲು ರಣತಂತ್ರ ರೂಪಿಸಿವೆ. ಈ ಮಧ್ಯೆ ಚುನಾವಣಾ ಅಧಿಕಾರಿಗಳು ಎಲೆಕ್ಷನ್‌ಗೆ ಬೇಕಾದ ಸಕಲ ಸಿದ್ಧತೆ ನಡೆಸುತ್ತಿದ್ದಾರೆ.

error: Content is protected !!
Scroll to Top