ಸಿಡಿಲಾರ್ಭಟಕ್ಕೆ ಮಹಿಳೆ ಸೇರಿದಂತೆ 6 ಕುರಿಗಳು ಬಲಿ

Death, deadbody, Waterfall

(ನ್ಯೂಸ್ ಕಡಬ)newskadaba.com ಕೊಪ್ಪಳ, ಏ.26. ಕುಷ್ಟಗಿ ತಾಲೂಕಿನ ಶಾಡಲಗೇರಿ ಗ್ರಾಮದಲ್ಲಿ ಸಿಡಿಲಾರ್ಭಟಕ್ಕೆ 65 ವರ್ಷದ ಮಹಿಳೆ ಸೇರಿದಂತೆ 6 ಕುರಿಗಳು ಬಲಿಯಾಗಿರುವ ಘಟನೆ ವರದಿಯಾಗಿದೆ. ಸಿಡಿಲಿನ ಆಘಾತಕ್ಕೆ ಮೂವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಭಾರಿ ಬಿರುಗಾಳಿಯೊಂದಿಗೆ ಸಿಡಿಲಿನ ಆರ್ಭಟ ಶುರುವಾಗಿದ್ದು, ಸಿಡಿಲಿನ ಆಘಾತಕ್ಕೆ ಹೊಲದಲ್ಲಿದ್ದ ಶಾಂತಮ್ಮ ದುರಗಪ್ಪ ಕಮತರ (65) ಸ್ಥಳದಲ್ಲೇ ಮೃತರಾಗಿದ್ದಾರೆ. ಪಕೀರಸಾಬ್ ನೈನಾಪೂರ, ರಮಜಾನಬೀ ನೈನಾಪೂರ, ಶಿವು ಆರಿ (28) ಗಾಯಗೊಂಡಿದ್ದು ಹನುಮನಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಗಂಡಿಬಾಗಿಲು-ನೆಹರು ತೋಟ-ವಳಕಡಮ ರಸ್ತೆಗೆ ದುರಸ್ತಿಗೆ ಒಟ್ಟು 40 ಲಕ್ಷ ರೂ► ಕೊೈಲ ಫಾರ್ಮ್‍ನೊಳಗಿನ ರಸ್ತೆ ಸಮಸ್ಯೆಗೆ ಸಚಿವರ ಭೇಟಿ: ಶಾಸಕ ಅಂಗಾರ ಭರವಸೆ

error: Content is protected !!
Scroll to Top